3 ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಲಂಕಾ ಪಂದ್ಯ

ಏಷ್ಯಾಕಪ್ ಟಿ20 ಸರಣಿ ನಿಮಿತ್ತ ಮೀರ್ ಪುರದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ 3 ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಈ ಎಲ್ಲ ದಾಖಲೆಗಳು ಭಾರತೀಯ ಆಟಗಾರರದ್ದೇ ಎನ್ನುವುದು ವಿಶೇಷ...
ಕೊಹ್ಲಿ, ನೆಹ್ರಾ ಮತ್ತು ಧೋನಿ (ಸಂಗ್ರಹ ಚಿತ್ರ)
ಕೊಹ್ಲಿ, ನೆಹ್ರಾ ಮತ್ತು ಧೋನಿ (ಸಂಗ್ರಹ ಚಿತ್ರ)

ಮೀರ್ ಪುರ: ಏಷ್ಯಾಕಪ್ ಟಿ20 ಸರಣಿ ನಿಮಿತ್ತ ಮೀರ್ ಪುರದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ 3 ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಈ ಎಲ್ಲ ದಾಖಲೆಗಳು ಭಾರತೀಯ  ಆಟಗಾರರದ್ದೇ ಎನ್ನುವುದು ವಿಶೇಷ.

ಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಆಟಗಾರರ ಈ ಮೂರು ದಾಖಲೆಗಳ ಪಟ್ಟಿ ಇಂತಿದೆ.

1.ನಾಯಕನಾಗಿ ಧೋನಿ 200 ಸಿಕ್ಸರ್ ಸಿಡಿಸಿದ ಧೋನಿ
ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ನಾಯಕನಾಗಿ ಅತಿ ಸಿಕ್ಸರ್ ಸಿಡಿಸಿದ ದಾಖಲೆ ಬರೆದರು. ಆ ಮೂಲಕ   ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಧೋನಿ ಭಾಜನರಾದರು. ಧೋನಿ ನಂತರದ ಸ್ಥಾನದಲ್ಲಿ ರಿಕಿ ಪಾಂಟಿಂಗ್ ಇದ್ದು,  ಇವರು 171 ಸಿಕ್ಸರ್ ಸಿಡಿಸಿದ್ದಾರೆ. ನಾಯಕನಾಗದೇ ಆಡಿದ ಪಂದ್ಯಗಳಲ್ಲಿ ಧೋನಿ 98 ಸಿಕ್ಸರ್ ಬಾರಿಸಿದ್ದಾರೆ.

2.ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಟ್ಟಿಯಲ್ಲಿ ಕೊಹ್ಲಿ, ಯುವಿಗೆ ಅಗ್ರಸ್ಥಾನ
ಇನ್ನು ನಿನ್ನೆಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪಶಸ್ತಿಯೊಂದಿಗೆ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಪಟ್ಟಿಯಲ್ಲಿ ಯುವರಾಜ್ ಸಿಂಗ್ ರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಯುವರಾಜ್ ಸಿಂಗ್ ಕೂಡ ಒಟ್ಟು 7 ಬಾರಿ ಪಂದ್ಯ  ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

3.ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡ ನೆಹ್ರಾ
ಈ ಹಿಂದೆ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಪವರ್ ಪ್ಲೇ ಓವರ್ ಗಳಲ್ಲಿ ಕನಿಷ್ಠ 1 ವಿಕೆಟ್ ಗಳಿಸಿದ್ದ ಸಾಧನೆ ಮಾಡಿದ್ದ ಭಾರತದ ಆಶೀಶ್ ನೆಹ್ರಾ ತಮ್ಮದೇ ದಾಖಲೆಯನ್ನು ಉತ್ತಮ  ಪಡಿಸಿಕೊಂಡರು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿಯೂ ಪವರ್ ಪ್ಲೇ ಓವರ್ ನಲ್ಲಿ ಚಾಂದಿಮಾಲ್ ವಿಕೆಟ್ ಪಡೆಯುವ ಮೂಲಕ ನೆಹ್ರಾ ಈ ಸಾಧನೆ ಮಾಡಿದರು.  ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ  ನಡೆದ ಟಿ20ಯಲ್ಲಿ ಮೊದಲ ಬಾರಿಗೆ ಪವರ್ ಪ್ಲೇ ಅವಧಿಯಲ್ಲಿ ವಿಕೆಟ್ ಉರುಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com