ಭಾರತ-ಪಾಕ್ ಪಂದ್ಯ ಧರ್ಮಶಾಲಾದಿಂದ ಈಡನ್ ಗಾರ್ಡನ್ ಗೆ ಸ್ಥಳಾಂತರ

ಭಾರತ-ಪಾಕಿಸ್ತಾನ ನಡುವಿನ ಐಸಿಸಿ ಟ್ವೆಂಟಿ 20 ವಿಶ್ವಕಪ್ ಪಂದ್ಯ ಪಶ್ಚಿಮ ಬಂಗಾಳದ ಈಡನ್ ಗಾರ್ಡನ್ ನಲ್ಲಿ ಮಾ.19 ರಂದು ನಡೆಯಲಿದೆ.
ಭಾರತ-ಪಾಕ್ ಪಂದ್ಯ ಧರ್ಮಶಾಲಾದಿಂದ ಈಡನ್ ಗಾರ್ಡನ್ ಗೆ ಸ್ಥಳಾಂತರ
ಭಾರತ-ಪಾಕ್ ಪಂದ್ಯ ಧರ್ಮಶಾಲಾದಿಂದ ಈಡನ್ ಗಾರ್ಡನ್ ಗೆ ಸ್ಥಳಾಂತರ

ಕೋಲ್ಕತಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪಂದ್ಯ ಆಡಲು ಪಾಕಿಸ್ತಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಐಸಿಸಿ ಟ್ವೆಂಟಿ 20 ವಿಶ್ವಕಪ್ ಪಂದ್ಯ ಪಶ್ಚಿಮ ಬಂಗಾಳದ ಈಡನ್ ಗಾರ್ಡನ್ ನಲ್ಲಿ ಮಾ.19 ರಂದು ನಡೆಯಲಿದೆ.

ಭದ್ರತಾ ಕಾರಣಗಳಿಂದಾಗಿ ಪಂದ್ಯವನ್ನು ಈಡನ್ ಗಾರ್ಡನ್ ಗೆ ಸ್ಥಳಾಂತರಿಸಲಾಗಿರುವುದನ್ನು ಐಸಿಸಿ ಸಿಇಒ ಡೇವ್ ರಿಚರ್ಡ್ಸನ್ ಅಧಿಕೃತವಾಗಿ ಘೋಷಿಸಿದ್ದಾರೆ.  ಐಸಿಸಿ ಟ್ವೆಂಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನನದ ನಡುವಿನ ಪಂದ್ಯವನ್ನು ಧರ್ಮಶಾಲಾದಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಶೆಹರ್ಯಾರ್ ಖಾನ್ ಐಸಿಸಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.

ಧರ್ಮಶಾಲಾದಲ್ಲಿ ಪಂದ್ಯ ನಡೆಯುವುದು ಅನುಮಾನವಾದ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ ನಲ್ಲಿ ಪಂದ್ಯ ನಡೆದರೆ ಅಗತ್ಯ ಭದ್ರತೆ ನೀಡುವುದಾಗಿ ಕೋಲ್ಕತಾ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com