ಕೊಹ್ಲಿ, ಧೋನಿ ಪಾಕ್‌ಗೆ ಬಂದರೆ ಅಲ್ಲಿ ಟ್ರಾಫಿಕ್ ಜಾಮ್ ಆಗಿಬಿಡುತ್ತದೆ: ವಸೀಂ ಅಕ್ರಂ

1999ರಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪರಾಭವಗೊಳಿಸಿದಾಗ ಭಾರತೀಯ ಅಭಿಮಾನಿ..
ವಸೀಂ ಅಕ್ರಂ- ವಿರಾಟ್ ಕೊಹ್ಲಿ- ಎಂಎಸ್ ಧೋನಿ
ವಸೀಂ ಅಕ್ರಂ- ವಿರಾಟ್ ಕೊಹ್ಲಿ- ಎಂಎಸ್ ಧೋನಿ
Updated on: 
ನವದೆಹಲಿ: ಪಾಕಿಸ್ತಾನದಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಪ್ರೀತಿ ನಮಗೆ ಭಾರತದಲ್ಲಿ ಸಿಕ್ಕಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ಹೇಳಿ ವಿವಾದಕ್ಕೀಡಾದರು. ಈಗ ಅದರ ಬೆನ್ನಲ್ಲೇ ಪಾಕ್‌ನ ಮಾಜಿ ಕ್ರಿಕೆಟಿಗ ವಸೀಂ ಅಕ್ರಂ ಅಲ್ಲಿನ ಜನರು ಭಾರತೀಯ ಕ್ರಿಕೆಟಿಗರ ಬಗ್ಗೆ ಎಷ್ಟು ಪ್ರೀತಿ ತೋರಿಸುತ್ತಾರೆ ಎಂಬುದರ ಬಗ್ಗೆ ಮಾತುಗಳನ್ನಾಡಿದ್ದಾರೆ.
ಇಂಡಿಯಾ ಟುಡೆ ಟೀವಿ ವಾಹಿನಿಗೆ ಸಂದರ್ಶನ ನೀಡಿದ ವಸೀಂ, ತಾವು 1999ರಲ್ಲಿ  ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪರಾಭವಗೊಳಿಸಿದಾಗ ಭಾರತೀಯ ಅಭಿಮಾನಿಗಳು ಚೆನ್ನೈನಲ್ಲಿ ಯಾವ ರೀತಿ ಎದ್ದು ನಿಂತು ಅಭಿನಂದನೆ ಸಲ್ಲಿಸಿದ್ದು ನಮ್ಮ ಮೇಲೆ ಭಾರತೀಯರ ಪ್ರೀತಿ ಎಷ್ಟಿದೆ ಎಂಬುದಕ್ಕೆ ಉದಾಹರಣೆ ಎಂದಿದ್ದಾರೆ. 
ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಪಾಕಿಸ್ತಾನಕ್ಕೆ ಬಂದರೆ ಅವರನ್ನು ನೋಡಲು ಜನರು ಕಿಕ್ಕಿರಿದು ಬರುತ್ತಾರೆ. ಇವರನ್ನು ನೋಡುವ ತವಕದಲ್ಲಿ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಆಗಿ ಬಿಡುತ್ತದೆ ಎಂದು ಅಕ್ರಂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com