ಗೇಯ್ಲ್ ಸಿಕ್ಸರ್ ದರ್ಬಾರ್: ಮೆಕ್ಕಲಮ್ ದಾಖಲೆ ಧೂಳಿಪಟ

ವೆಸ್ಟ್ ಇಂಡಿಸ್ ದೈತ್ಯ ಬಾಟ್ಸಮನ್ ಕ್ರಿಸ್ ಗೇಲ್ ಬುಧವಾರ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ...
ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ (ಸಂಗ್ರಹ ಚಿತ್ರ)
ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ (ಸಂಗ್ರಹ ಚಿತ್ರ)

ಮುಂಬೈ: ವೆಸ್ಟ್ ಇಂಡಿಸ್ ದೈತ್ಯ ಬಾಟ್ಸಮನ್ ಕ್ರಿಸ್ ಗೇಲ್ ಬುಧವಾರ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದ ನ್ಯೂಜಿಲೆಂಡ್ ತಂಡದ ಆಟಗಾರ ಮೆಕ್ಕಲಮ್ ಅವರ ದಾಖಲೆಯನ್ನು ಕ್ರಿಸ್ ಗೇಯ್ಲ್ ಬುಧವಾರ ಧೂಳಿಪಟ ಮಾಡಿದ್ದಾರೆ.

ಆ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ಅತ್ಯಧಿಕ ಸಿಕ್ಸರ್ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಒಟ್ಟು 47 ಎಸೆತಗಳನ್ನು ಎದುರಿಸಿದ್ದ ಕ್ರಿಸ್ ಗೇಯ್ಲ್  ಬರೊಬ್ಬರಿ 11 ಸಿಕ್ಸರ್ ಗಳನ್ನು ಮತ್ತು 5 ಬೌಂಡರಿಗಳನ್ನು ಬಾರಿಸಿ ಶತಕ ಸಿಡಿಸಿದ್ದರು. ಈ ಪಂದ್ಯದ ಸಿಕ್ಸರ್ ಗಳ ಸಹಾಯದೊಂದಿಗೆ ಇದೀಗ ಕ್ರಿಸ್ ಗೇಯ್ಲ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕ್ಕಲಮ್ ಅವರು ಒಟ್ಟು 70 ಇನ್ನಿಂಗ್ಸ್ ಗಳಲ್ಲಿ 91 ಸಿಕ್ಸರ್ ಗಳನ್ನು ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ 11  ಸಿಕ್ಸರ್ ಗಳನ್ನು ಸಿಡಿಸಿದ ಗೇಯ್ಲ್ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 98ಕ್ಕೆ ಏರಿಕೆ ಮಾಡಿಕೊಂಡು ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಕೇವಲ 44 ಪಂದ್ಯಗಳಲ್ಲಿ ಗೇಯ್ಲ್ ಈ  ದಾಖಲೆ ನಿರ್ಮಿಸಿದ್ದಾರೆ.

ಮೆಕ್ಕಲಮ್ ಬಳಿಕದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಇದ್ದು, 52 ಪಂದ್ಯಗಳಲ್ಲಿ ಅವರು ಒಟ್ಟು 79 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ನಾಲ್ಕು ಮತ್ತು ಐದನೇ  ಸ್ಥಾನದಲ್ಲಿ 73 ಸಿಕ್ಸರ್ ಸಿಡಿಸಿರುವ ಡೇವಿಡ್ ವಾರ್ನರ್ ಮತ್ತು 70 ಸಿಕ್ಸರ್ ಗಳನ್ನು ಸಿಡಿಸಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿ ಇದ್ದಾರೆ.

ಒಟ್ಟು 44 ಪಂದ್ಯಗಳಿಂದ 31.12 ರ ಸರಾಸರಿಯಲ್ಲಿ ಬರೊಬ್ಬರಿ 98 ಸಿಕ್ಸರ್​ಗಳನ್ನು ಬಾರಿಸಿರುವ ಕ್ರಿಸ್ ಗೇಯ್ಲ್ ಅವರ ಸರಾಸರಿ ಸ್ಟ್ರೈಕ್​ರೇಟ್ 145.30. ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ  ಟಿ20 ವಿಶ್ವಕಪ್​ನಲ್ಲಿ 9 ಸಿಕ್ಸರ್​ಗಳ ಸುರಿಮಳೆಗೈದು ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್​ಗಳ ದಾಖಲೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಮೊದಲು ನ್ಯೂಜಿಲೆಂಡ್​ನ  ಬ್ರೆಂಡನ್ ಮೆಕಲಂ ಹೆಸರಿನಲ್ಲಿದ್ದ ಅತಿ ಹೆಚ್ಚು ಸಿಕ್ಸರ್ (91) ದಾಖಲೆಯನ್ನು ಕ್ರಿಸ್ ಗೇಲ್ ಅಳಿಸಿ ಹಾಕಿದ್ದಾರೆ.

ಶತಕದಲ್ಲಿಯೂ ಗೇಯ್ಲ್ ದಾಖಲೆ
ಇನ್ನು ಟಿ20 ವಿಶ್ವಕಪ್ ನಲ್ಲಿ 2 ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ ಪಾತ್ರರಾಗಿದ್ದಾರೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 47  ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ ಗೇಯ್ಲ್ ಶತಕ ಸಿಡಿಸಿದ್ದರು. ಇದಕ್ಕೂ ಮೊದಲು 2007ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ  ಗೇಯ್ಲ್ ಮೊದಲ ಶತಕ ಸಿಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com