

ಕೋಲ್ಕತಾ: ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು. ಆದರೆ ಅದು ಕೇವಲ ಕ್ರಿಕೆಟ್ ಅಂಗಳದಲ್ಲಿ ಮಾತ್ರ ಎಂಬುದು ಮತ್ತೆ ಸಾಬೀತಾಗಿದೆ.
ಇದೇ ಶನಿವಾರ ಪರಸ್ಪರ ಎದುರಾಗಲಿರುವ ಬದ್ಧಶತ್ರು ತಂಡದ ಆಟಗಾರರಿಬ್ಬರು ನೆಟ್ಸನಲ್ಲಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಸ್ನೇಹವನ್ನು ಪ್ರದರ್ಶನ ಮಾಡಿದ್ದಾರೆ. ಇದು ಮತ್ತಾರು ಅಲ್ಲ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸುರೇಶ್ ರೈನಾ ಮತ್ತು ಪಾಕಿಸ್ತಾನದ ಆಲ್ ರೌಂಡರ್ ಮತ್ತು ಭಾರತದ ಅಳಿಯ ಶೋಯೆ ಬ್ ಮಲಿಕ್. ಗುರುವಾರ ಈಡನ್ ಗಾರ್ಡನ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಇಬ್ಬರು ಆಟಗಾರರು ಪರಸ್ಪರ ಎದುರಾಗಿದ್ದೇ ತಡ ಹಸ್ತಲಾಘವದ ಜತೆಗೆ ಅಪ್ಪುಗೆಯ ಮೂಲಕ ಸ್ನೇಹಿತರ೦ತೆ ಆಪ್ತತೆ ಪ್ರದಶಿ೯ಸಿದರು ರೈನಾ ನೆಟ್ಸ್ ನಲ್ಲಿ ಇದ್ದಿದ್ದನ್ನು ಗಮನಿಸಿ ಅವರ ಬಳಿಗೆ ತೆರಳಿದ ಮಲಿಕ್ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಬ್ಯಾಟಿ೦ಗ್ ಕೋಚ್ ಸ೦ಜಯ್ ಬ೦ಗಾರ್ ಮಾರ್ಗದರ್ಶನದಲ್ಲಿ ರೈನಾ ಜೊತೆಗೆ ಅಜಿ೦ಕ್ಯಾ ರಹಾನೆ ಮತ್ತು ಪವನ್ ನೇಗಿ ಅಭ್ಯಾಸ ನಡೆಸುತ್ತಿದ್ದರು. ಭಾರತ ತ೦ಡ ಮೊದಲ ಪ೦ದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕ೦ಡು ಎರಡನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದರೆ, ಪಾಕಿಸ್ತಾನ ತ೦ಡ ಬಾ೦ಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಎರಡನೇ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದೆ.
ಆದರೆ ಐಸಿಸಿ ವಿಶ್ವಕಪ್ ಸರಣಿಯಲ್ಲೆ೦ದೂ ಭಾರತ ತಂಡ ಪಾಕಿಸ್ತಾನಕ್ಕೆ ಮಣಿದಿಲ್ಲ. ಟಿ20 ವಿಶ್ವಕಪ್‍ನಲ್ಲೂ ಪಾಕ್ ವಿರುದ್ಧದ ಎಲ್ಲ 4 ಪ೦ದ್ಯ ಗೆದ್ದ ಅಜೇಯ ದಾಖಲೆ ಭಾರತದ್ದಾಗಿದೆ.