

ಬೆ೦ಗಳೂರು: ಮಾಜಿ ಚಾ೦ಪಿಯನ್ ಇ೦ಗ್ಲೆ೦ಡ್ ಮಹಿಳಾ ತ೦ಡ ಪ್ರಸಕ್ತ ಟಿ20 ವಿಶ್ವಕಪ್ ಟೂನಿ೯ಯಲ್ಲಿ ಭಜ೯ರಿ ಆರ೦ಭ ಕ೦ಡಿದ್ದು, ಬಾಂಗ್ಲಾದೇಶದ ತನ್ನ ಮೊದಲ ಪಂದ್ಯದ್ಯಲ್ಲಿ 36 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರ ತಂಡ ನಾಯಕಿ ಚಾಲೊ೯ಟ್ ಎಡ್ವಡ್ಸ್‍೯ (60 ರನ್) ಅವರ ಸಮಯೋಚಿತ ಆಟದ ನಿರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳ ಸ್ಪರ್ಧಾತ್ಮ ಮೊತ್ತ ಕಲೆಹಾಕಿತು. ಎಡ್ವಡ್ಸ್‍೯ ಗೆ ಸ್ಕಿವರ್ (27 ರನ್) ಅವರು ಉತ್ತಮ ಸಾಥ್ ನೀಡಿದರು. ಇನ್ನು ಬಾಂಗ್ಲಾಪರ ಜಹನಾರಾ ಆಲಂ 3 ವಿಕೆಟ್ ಕಬಳಿಸಿದರೆ, ಖತೂನ್, ಫಹಿಮಾ ಖತೂನ್, ಟುಲ್ ಕುಬ್ರಾ ಮತ್ತು ರುಮಾನಾ ಅಹ್ಮದ್ ಅವರು ತಲಾ 1 ವಿಕೆಟ್ ಕಬಳಿಸಿದರು.
ಇನ್ನು ಇಂಗ್ಲೆಂಡ್ ತಂಡ ನೀಡಿದ 153 ರನ್ ಗಳ ಸವಾಲನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ವನಿತೆಯರ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 117ರನ್ ಪೇರಿಸಲಷ್ಟೆ ಶಕ್ತವಾಯಿತು. ಬಾಂಗ್ಲಾ ಪರ ನಿಗರ್ ಸುಲ್ತಾನಾ 35, ಸಲ್ಮಾ ಖಟುನ್ 32 ಅವರು ಉತ್ತಮ ಹೋರಾಟ ನೀಡಿದರಾದರೂ, ಬಾಂಗ್ಲಾವನ್ನು ಗೆಲುವಿನತ್ತ ನಡೆಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಪರ ಶ್ರುಬ್ಸೋಲೆ 2 ವಿಕೆಟ್, ಬ್ರಂಟ್, ಗುನ್ ಮತ್ತು ಹೇಜಲ್ ಅವರು ತಲಾ 1 ವಿಕೆಟ್ ಪಡೆದರು.
ಆಕರ್ಷಕ ಅರ್ಧಶತಕ ಗಳಿಸಿದ ಇಂಗ್ಲೆಂಡ್ ನ ಎಡ್ವಡ್ಸ್‍೯ ಪ೦ದ್ಯಶ್ರೇಷ್ಠ ಪ್ರಶಸ್ತಿ ಪಡೆದರು.