ಕ್ರಿಕೆಟ್

ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕು ಮುನ್ನ ಭಾರಿ ಮಳೆ, ಪಂದ್ಯ ನಡೆಯುವ ಬಗ್ಗೆ ಆತಂಕ

ವಿಶ್ವಕಪ್ ಟಿ20 ಟೂರ್ನಿ ಆರಂಭವಾದ ದಿನದಿಂದಲೂ ಸಾಕಷ್ಟು ಚರ್ಚೆ..

ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕು ಮುನ್ನ ಭಾರಿ ಮಳೆ, ಪಂದ್ಯ ನಡೆಯುವ ಬಗ್ಗೆ ಆತಂಕ
ಈಡನ್ ಗಾರ್ಡನ್
Published On :
ಕೋಲ್ಕತಾ: ವಿಶ್ವಕಪ್ ಟಿ20 ಟೂರ್ನಿ ಆರಂಭವಾದ ದಿನದಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಭಾರತ - ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯ ಶನಿವಾರ ಸಂಜೆ ರಂಭವಾಗಲಿದ್ದು, ಪಂದ್ಯಕ್ಕು ಮುನ್ನ ಕೋಲ್ಕತಾದಲ್ಲಿ ಭಾರಿ ಮಳೆ ಸುರಿದಿದ್ದು, ಪಂದ್ಯ ನಡೆಯುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.
ಐತಿಹಾಸಿಕ ಈಡನ್‌ ಗಾರ್ಡನ್ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರೋಚಕ ಪಂದ್ಯ ನಡೆಯುತ್ತಿದ್ದು, ಕ್ರೀಡಾಂಗಣದ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಅಲ್ಲದೆ ಈಗಲೂ ತುಂತುರು ಸುರಿಯುತ್ತಿದೆ. ಮಳೆಯಿಂದ ರಕ್ಷಿಸಲು ಕ್ರೀಡಾಂಗಣವನ್ನು ಸಂಪೂರ್ಣ ಟಾರ್ಪಲ್ ನಿಂದ ಮುಚ್ಚಲಾಗಿದೆ.
ರಾತ್ರಿ 7.30ರಿಂದ ಆರಂಭವಾಗಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಅಭಿಮಾನಿಗಳು ಯುದ್ಧದ ಮಹತ್ವ ಕೊಡುತ್ತಾರೆ. ಆ ನಿಟ್ಟಿನಲ್ಲಿ ಇದು ಹೈವೋಲ್ಟೇಜ್ ಪಂದ್ಯವಾಗಿದೆ.
ಇನ್ನು ಮಳೆ ನಿಂತರೆ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿದೆ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.