

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಡಿಮೆ ಮೊತ್ತ ಗಳಿಸಿದ್ದರು ಅಂತಿಮ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ ಭಾರತ ಮಹಿಳಾ ತಂಡ ಸೋತು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.
ಪಂದ್ಯಾವಳಿಯಲ್ಲಿ ಇದುವರೆಗೂ ಮಹಿಳಾ ತಂಡ ಆಡಿದ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಧರ್ಮಶಾಲಾದ ಎಚ್ ಪಿಸಿಎ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಕಲೆಹಾಕಿತು. ಸುಲಭ ಮೊತ್ತದ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ಗೆ 19 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ ಪರ ಚಾರ್ಲೋಟ್ ಎಡ್ವರ್ಡ್ಸ್ 4, ಬೀಮೌಂಟ್ 20, ಸಾರಾ 16, ಹೀದರ್ ನೈಟ್ 8, ಸ್ಕೀವರ್ 19, ಗ್ರೀನ್ ವೇ 0, ಡೇನಿಯಲ್ ವ್ಯಾಟ್ 5, ಜೆನ್ನಿ ಗುನ್ 7, ಕ್ಯಾಥರಿನ್ ಅಜೇಯ 4, ಅನ್ನಾ ಶ್ರಬ್ಸೋಲ್ 5 ರನ್ ಗಳಿಸಿದ್ದಾರೆ.
ಭಾರತ ಪರ ಎಕ್ತಾ 4, ಹರ್ಮನ್ ಪ್ರೀತ್ 2 ವಿಕೆಟ್ ಪಡೆದಿದ್ದಾರೆ.
ಭಾರತ ಪರ ವಿಆರ್ ವನಿತಾ 0, ಸ್ಮತಿ ಮಂದನಾ 12, ಮಿಥಾಲಿ ರಾಜ್ 20, ಶಿಖಾ ಪಾಂಡೆ 12, ಹರ್ಮನ್ ಪ್ರೀತ್ 26, ವೇದಾ ಕೃಷ್ಣಮೂರ್ತಿ 2, ಜೂಲನ್ 2 ಅನುಜಾ ಅಜೇಯ 13 ಹಾಗೂ ಎಕ್ತಾ 0 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಪರ ಹೀದರ್ ನೈಟ್ 3, ಅನ್ನಾ ಶ್ರಬ್ಸೋಲ್ 2, ಸ್ಕೀವರ್ 1 ವಿಕೆಟ್ ಪಡೆದಿದ್ದಾರೆ.