ನಾಕೌಟ್ ಫೈಟ್: ಇಂಡೋ-ಆಸೀಸ್ ತಂಡಗಳ ಬಲಾಬಲ

ಟಿ20 ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಿಗ್‍ಫೈಟ್ ನಡೆಯಲಿದ್ದು, ಉಭಯ ತಂಡಗಳಿಗೆ..
ಟೀಂ ಇಂಡಿಯಾ-ಆಸ್ಟ್ರೇಲಿಯಾ
ಟೀಂ ಇಂಡಿಯಾ-ಆಸ್ಟ್ರೇಲಿಯಾ

ಚಂಡೀಘಢ: ಟಿ20 ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಿಗ್‍ಫೈಟ್ ನಡೆಯಲಿದ್ದು, ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಯಕವಾಗಿದೆ.

ಪಂದ್ಯದಲ್ಲಿ ಗೆದ್ದವರು ಟಿ20 ವಿಶ್ವಕಪ್ ಸೆಮಿ ಫೈನಲ್‍ಗೆ ಎಂಟ್ರಿ ಕೊಡುತ್ತಾರೆ. ಇನ್ನು ಸೋತವರು ಮನೆ ಕಡೆ ದಾರಿ ಹಿಡಿಯಲಿದ್ದಾರೆ. ಹೀಗಾಗಿ ಮೊಹಾಲಿಯಲ್ಲಿ ನಡೆಯಲಿರೋ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಸೂಪರ್ 10 ಗ್ರೂಪ್ ನ ಬಿ ಗ್ರೂಪ್‍ನಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ ಮೂರು ಪಂದ್ಯಗಳನ್ನಾಡಿದ್ದು 2 ಪಂದ್ಯಗಳಲ್ಲಿ ಗೆದ್ದಿದ್ದು, 1 ಪಂದ್ಯವನ್ನು ಸೋತಿವೆ. ಆದರೆ ಇಲ್ಲಿ ರನ್ ರೇಟ್ ನಲ್ಲಿ ಆಸ್ಟ್ರೇಲಿಯಾ ಮುಂದಿದ್ದು, ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಲಿದೆ.

ಟೀಂ ಇಂಡಿಯಾದಲ್ಲಿ ಆರಂಭಿಕರ ವೈಫಲ್ಯ
ಆಸ್ಟ್ರೇಲಿಯಾ ವಿರುದ್ಧ ಸರಣಿ ಹಾಗೂ ಏಷ್ಯಾಕಪ್ ನ ಗೆಲುವಿಗೆ ಕಾರಣರಾಗಿದ್ದ ಟೀಂ ಇಂಡಿಯಾದ ಆರಂಭಿಕರ ಆಟಗಾರರು ಟಿ20 ವಿಶ್ವಕಪ್ ನಲ್ಲಿ ಅಂತಹದೇನು ಉತ್ತಮ ಆರಂಭ ಒದಗಿಸಲಿಲ್ಲ. ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರಿಂದ ಸ್ಫೋಟಕ ಆಟ ಕಾಣಿಸುತ್ತಿಲ್ಲ. ಇವರಿಬ್ಬರ ವೈಪಲ್ಯದಿಂದ ಟೀಂ ಇಂಡಿಯಾ ಭರ್ಜರಿ ರನ್ ಗಳಿಸುವಲ್ಲಿ ಯಡವುತ್ತಿದೆ. ಇವರಿಬ್ಬರು ಸ್ಫೋಟಕ ಬ್ಯಾಟಿಂಗ್ ನಿಂದ ಟೀಂ ಇಂಡಿಯಾಗೆ ಭದ್ರ ಬುನಾದಿ ಹಾಕಿಕೊಟ್ಟರೆ ಆಸ್ಟ್ರೇಲಿಯಾಗೆ ಭರ್ಜರಿ ರನ್ ಗುರಿ ನೀಡಬಹುದು.

ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡೋ ಸಾಧ್ಯತೆ ಇಲ್ಲ. ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ ಫಾರ್ಮ್‍ನಲ್ಲಿದ್ದಾರೆ.

ಇನ್ನು ಆಸ್ಟ್ರೇಲಿಯಾದಲ್ಲೂ ನಾಯಕ ಸ್ಟೀವನ್ ಸ್ಮಿತ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಡೇವಿಡ್ ವಾರ್ನರ್, ಗ್ಲೇನ್ ಮ್ಯಾಕ್ಸ್ ವೇಲ್, ಶೇನ್ ವಾಟ್ಸನ್, ಆರೋನ್ ಫಿಂಚ್ ರಂತ ಬಲಿಷ್ಠ ಆಟಗಾರರು ತಂಡದಲ್ಲಿ ಭಾರತವನ್ನು ಕಾಡೋದರಲ್ಲಿ ಅನುಮಾನವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com