
ಬೆಂಗಳೂರು: ಐಪಿಎಲ್ ಸೀಸನ್ 9ನ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿದ್ದು, ಕೋಲ್ತತಾಗೆ ಗೆಲ್ಲಲು 186 ರನ್ ಗಳ ಟಾರ್ಗೆಟ್ ನೀಡಿದೆ.
ಮೊದಲು ಟಾಸ್ ಗೆದ್ದ ಗಂಭೀರ್ ಪಡೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಕೊಹ್ಲಿ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿದೆ. ಇನ್ನಿಂಗ್ಸ್ ನ 2ನೇ ಓವರ್ ನಲ್ಲೇ ಆರಂಭಿಕ ಆಟಗಾರ ದೈತ್ಯ ಕ್ರಿಸ್ ಗೇಯ್ಲ್ ಔಟ್ ಆದರು. ಆ ಮೂಲಕ ಗೇಯ್ಲ್ ಅವರ ಕಳಪೆ ಫಾರ್ಮ್ ಮುಂದುವರೆಯಿತು. ಆದರೆ ವಿರಾಟ್ ಕೊಹ್ಲಿ ಜೊತೆಗೂಡಿದ ಕೆಎಲ್ ರಾಹುಲ್ ತಂಡಕ್ಕೆ 84 ರನ್ ಗಳ ಅಮೂಲ್ಯ ಜೊತೆಯಾಟವಾಡಿದರು. ಈ ಹಂತದಲ್ಲಿ ರಾಹುಲ್ ಆಕರ್ಷಕ ಅರ್ಧ ಶತಕ ಸಿಡಿಸಿ ಚಾವ್ಲಾ ಬೌಲಿಂಗ್ ನಲ್ಲಿ ಔಟ್ ಆದರೆ, ಕೊಹ್ಲಿ ಕೂಡ 52 ರನ್ ಗಳಿಸಿ ಮಾರ್ಕೆಲ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಬಂದ ಡಿವಿಲಿಯರ್ಸ್ ಬಂದಷ್ಟೇ ವೇಗವಾಗಿ ಚಾವ್ಲಾ ಎಲ್ ಬಿ ಬಲೆಗೆ ಬಿದ್ದರೆ, ಅಂತಿಮ ಹಂತದಲ್ಲಿ ಸಿಡಿದು ನಿಂತ ವಾಟ್ಸನ್ ಅಮೂಲ್ಯ 33 ರನ್ ಗಳಿಸಿ ಅಜೇಯರಾಗಿ ಉಳಿದರು.ವಾಟ್ಸನ್ ಗೆ ಉತ್ತಮ ಸಾಥ್ ನೀಡಿದ ಸಚಿನ್ ಬೇಬಿ 16 ರನ್ ಗಳಿಸಿ ಔಟ್ ಆದರೆ, ಸ್ಟುವರ್ಟ್ ಬಿನ್ನಿ 16 ರನ್ ಗಳಿಸಿ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು. ಅಂತಿಮವಾಗಿ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.
Advertisement