"ಇಂಡಿಯಾ" ಒಳಿತಿಗಾಗಿ ಜಾಂಟಿ ರೋಡ್ಸ್ ವಿಶೇಷ ಪೂಜೆ!

ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜಾಂಟಿ ರೋಡ್ಸ್ "ಇಂಡಿಯಾ" ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಪೂಜಾ ಕೈಂಕರ್ಯದಲ್ಲಿ ಜಾಂಟಿ ರೋಡ್ಸ್ ದಂಪತಿ (ಚಿತ್ರಕೃಪೆ: ಇನ್ ಸ್ಟಾಗ್ರಾಮ್)
ಪೂಜಾ ಕೈಂಕರ್ಯದಲ್ಲಿ ಜಾಂಟಿ ರೋಡ್ಸ್ ದಂಪತಿ (ಚಿತ್ರಕೃಪೆ: ಇನ್ ಸ್ಟಾಗ್ರಾಮ್)
Updated on

ಮುಂಬೈ: ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜಾಂಟಿ ರೋಡ್ಸ್ ಇಂಡಿಯಾ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಅರೇ ಇದೇನಿದು ದಕ್ಷಿಣ ಆಫ್ರಿಕಾದ ಆಟಗಾರನಿಂದ ಭಾರತದ ಒಳಿತಿಗಾಗಿ ವಿಶೇಷ ಪೂಜೆಯೇ ಎಂದು ಬೆರಗಾಗಬೇಡಿ. ರೋಡ್ಸ್ ತಮ್ಮ ಪುತ್ರಿ ಇಂಡಿಯಾ ಒಳಿತಿಗಾಗಿ ವಿಶೇಷ ಪೂಜೆ  ಮಾಡಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸನಾತನ ಸಂಪ್ರದಾಯಕ್ಕೆ ಮಾರುಹೋಗಿರುವ ಜಾಂಟಿ ರೋಡ್ಸ್ ತಮ್ಮ ಪುತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದು, ಆಕೆಯ ಉಜ್ವಲ  ಭವಿಷ್ಯಕ್ಕಾಗಿ ಮುಂಬೈನನಲ್ಲಿ ವಿಶೇಷ ಹೋಮ-ಹವನಗಳನ್ನು ಮಾಡಿಸುತ್ತಿದ್ದಾರೆ.

ಕಳೆದ ವರ್ಷ ಮುಂಬೈನಲ್ಲೇ ಜನಿಸಿದ್ದ ರೋಡ್ಸ್ ಪುತ್ರಿ ಇಂಡಿಯಾಗಾಗಿ ಸಾಂತಾಕ್ರೂಜ್ ನಲ್ಲಿರುವ ಪೇಜಾವರ ಮಠದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಮತ್ತು ಹಾಲಿ ಮುಂಬೈ  ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ವಿಶೇಷ ಪೂಜೆಯಲ್ಲಿ ತಲ್ಲೀನರಾಗಿದ್ದಾರೆ. ಜಾಂಟಿ ರೋಡ್ಸ್ ದಂಪತಿಗೆ ಇಂಡಿಯಾ ಅಲ್ಲದೇ ಇನ್ನೋರ್ವ ಪುತ್ರಿ ಮತ್ತು ಪುತ್ರ ಕೂಡ  ಇದ್ದು, ಕುಟುಂಬಸ್ಥರು ಪ್ರಸ್ತುತ ಮಠದಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಭಾರತೀಯ ಧಾರ್ಮಿಕತೆಯನ್ನು ಹೆಚ್ಚಾಗಿ ನಂಬುವ ಜಾಂಟಿ ರೋಡ್ಸ್ ಇತ್ತೀಚೆಗೆ ತಮಿಳುನಾಡಿನ ಅಣ್ಣಾಮಲೈ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Performing Puja for baby India

A photo posted by @jontyrhodes8 on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com