ಆರ್‌ಸಿಬಿ ತಂಡ ಆರಂಭಿಕ ದಾಂಡಿಗನಾಗಿ ಕ್ರೀಸ್ ಗಿಳಿದ ಕ್ರಿಸ್ ಗೇಲ್ 4 ನೇ ಓವರ್‌ನಲ್ಲಿ ಕುಲಕರ್ಣಿ ಬಾಲ್‌ಗೆ ಔಟಾದರು. ಫಾರ್ಮ್ ಕಳೆದುಕೊಂಡಿರುವ ಗೇಲ್ ಈ ಪಂದ್ಯದಲ್ಲಿ ಒಂದು ಬೌಡರಿ ಬಾರಿಸಿ ಗಳಿಸಿದ್ದು ಕೇವಲ 6 ರನ್! ಆರಂಭದಲ್ಲೇ ಗೇಲ್ ವಿಕೆಟ್ ಕಳೆದುಕೊಂಡರೂ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅದ್ಭುತ ಪ್ರದರ್ಶನ ಮತ್ತು ಹೊಡೆಬಡಿ ಜುಗಲ್‌ಬಂಧಿಯಿಂದ ಆರ್‌ಸಿಬಿ ಬೃಹತ್ ಮೊತ್ತವನ್ನು ಪೇರಿಸುವಂತಾಯಿತು.