ರಣಜಿ ಟ್ರೋಫಿ: ದೆಹಲಿ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ರಣಜಿ ಟ್ರೋಫಿಯಲ್ಲಿ ಬಲಿಷ್ಠ ದೆಹಲಿ ತಂಡವನ್ನು ಅಲ್ಪಮೊತ್ತಕ್ಕೆ ಆಲ್ ಔಟ್ ಮಾಡುವ ಮೂಲಕ ಕರ್ನಾಟಕ ಇನ್ನಿಂಗ್ಸ್ ಮತ್ತು 160 ರನ್ ಗಳಿಂದ ಭರ್ಜರಿ ಜಯ...
ಕರ್ನಾಟಕ
ಕರ್ನಾಟಕ
Updated on: 
ಕೋಲ್ಕತ್ತ: ರಣಜಿ ಟ್ರೋಫಿಯಲ್ಲಿ ಬಲಿಷ್ಠ ದೆಹಲಿ ತಂಡವನ್ನು ಅಲ್ಪಮೊತ್ತಕ್ಕೆ ಆಲ್ ಔಟ್ ಮಾಡುವ ಮೂಲಕ ಕರ್ನಾಟಕ ಇನ್ನಿಂಗ್ಸ್ ಮತ್ತು 160 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. 
ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ 414 ರನ್ ಗಳಿಗೆ ಸರ್ವಪತನ ಕಂಡಿತ್ತು. ನಂತರ ಬ್ಯಾಟಿಂಗ್ ಮಾಡಿದ ದೆಹಲಿ ಮೊದಲ ಇನ್ನಿಂಗ್ಸ್ 164 ರನ್ ಗಳಿಗೆ ಆಲ್ಔಟ್ ಆಗಿ ಫಾಲೋ ಆನ್ ಗೆ ಸಿಲುಕಿತು. ನಂತರ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿದ ದೆಹಲಿ ತಂಡವನ್ನು 90 ರನ್ ಗಳಿಗೆ ಆಲ್ ಔಟ್ ಮಾಡುವ ಮೂಲಕ ಕರ್ನಾಟಕ ಜಯ ಸಾಧಿಸಿದೆ. 
ಕರ್ನಾಟಕ ಬೌಲರ್ ಗಳ ಸೀಮಿತ ದಾಳಿಗೆ ದೆಹಲಿ ತಂಡ ತತ್ತರಿಸಿತು. ಕೆ ಗೌತಮ್ 5 ವಿಕೆಟ್ ಪಡೆದರೆ. ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದು ತಂಡಕ್ಕೆ ಜಯ ತಂದುಕೊಟ್ಟರು. 
ಈ ಮೂಲಕ ಕರ್ನಾಟಕ ಒಂದು ಡ್ರಾ ಮತ್ತು ಒಂದು ಗೆಲುವಿನೊಂದಿಗೆ 10 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com