ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಸೈನಿಕರಿಗೆ ದೀಪಾವಳಿ ಹಬ್ಬದ ವಿಡಿಯೋ ಸಂದೇಶ ಕಳುಹಿಸಿದ ವಿರಾಟ್ ಕೊಹ್ಲಿ

ಗಡಿ ಕಾಯುತ್ತಿರುವ ಭಾರತೀಯ ಸೇನೆಯ ಯೋಧರಿಗೆ ಟೀಂ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿ ವಿಡಿಯೋ ಮೂಲಕ ದೀಪಾವಳಿ ಹಬ್ಬದ ಶುಭಾಶಯ ..

ನವದೆಹಲಿ: ಗಡಿ ಕಾಯುತ್ತಿರುವ ಭಾರತೀಯ ಸೇನೆಯ ಯೋಧರಿಗೆ ಟೀಂ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿ  ವಿಡಿಯೋ ಮೂಲಕ ದೀಪಾವಳಿ ಹಬ್ಬದ ಶುಭಾಶಯ ಕಳುಹಿಸಿದ್ದಾರೆ.

ಟ್ವಿಟರ್‌ ಮೂಲಕ ಯೋಧರಿಗೆ ಶುಭಾಶಯ ತಿಳಿಸಿರುವ ಕೊಹ್ಲಿ, ಕುಟುಂಬದಿಂದ ದೂರ ಇರುವುದರಿಂದ ಎಷ್ಟು ಕಷ್ಟ ಎಂಬುದು ನನಗೆ ಗೊತ್ತು. ನೀವು ನಮ್ಮ ದೇಶವನ್ನು ಕಾಯುತ್ತಿದ್ದೀರಿ, ಇದು ಅತೀ ದೊಡ್ಡ ಕರ್ತವ್ಯ. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ನನ್ನ ಸಹೋದರರೇ, ನಿಮ್ಮ ಮೇಲೆ ನನಗೆ ಭರವಸೆ ಇದೆ. ಅಲ್ಲದೆ ಇಡೀ ದೇಶವೇ ನಿಮ್ಮ ಜೊತೆ ಇದೆ. ಅದರಂತೆ ಯೋಧರು ಎಲ್ಲೆ ಕಂಡರೂ ಅವರಿಗೆ ಸೆಲ್ಯೂಟ್‌ ಮಾಡಿ. ನಾವು ಮಾಡುವ ಹಬ್ಬಗಳ ಆಚರಣೆ ಶಾಂತಿಯುತವಾಗಿ ನೆರವೇರಿಸಲು, ಶಾಂತಿಯುತವಾಗಿ ಜೀವಿಸಲು ಯೋಧರೇ ಕಾರಣ ಎಂದಿರುವ ಕೊಹ್ಲಿ ಜೈ ಹಿಂದ್‌ ಅಂತಾ ಟ್ವೀಟ್ ಮಾಡಿದ್ದಾರೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ #Sandesh2Soldiers  ಎಂಬ ಶೀರ್ಷಿಕೆಯಡಿ ದೇಶ ಕಾಯುವ ಸೈನಿಕರಿಗೆ ದೀಪಾವಳಿ ಸಂದೇಶ ಕಳುಹಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com