ಕಾನ್ಪುರ್: ಟೀಂ ಇಂಡಿಯಾ ತನ್ನ ಐತಿಹಾಸಿಕ 500ನೇ ಟೆಸ್ಟ್ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್ ಓರ್ವ ಅಮೂಲ್ಯ ಕ್ರಿಕೆಟಿಗ ಎಂದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊಗಳಿದ್ದಾರೆ.
ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದ್ಯ ವಿಶ್ವದ ಪರಿಣಾಮಕಾರಿ ಆಟಗಾರರಲ್ಲಿ ಅಶ್ವಿನ್ ಅಗ್ರ3-4ರಲ್ಲಿರುತ್ತಾರೆ.
ಟೆಸ್ಟ್ ಪಂದ್ಯಗಳನ್ನು ಬೌಲರ್ ಗಳು ಮಾತ್ರ ಗೆಲ್ಲಿಸಿಕೊಡಬಲ್ಲರು ಎಂಬುದು ನನ್ನ ಅಭಿಪ್ರಾಯ. ಅಂತವರಲ್ಲಿ ಅಶ್ವಿನ್ ಕೂಡ ಒಬ್ಬರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಶ್ವಿನ್ ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲ ಜಾಣ್ಮೆ ಅವರದಲ್ಲಿದೆ. ಹೀಗಾಗಿ ಟೆಸ್ಟ್ ತಂಡದಲ್ಲಿ ಅವರಂಥ ಆಟಗಾರರಿಗೆ ಬೆಲೆ ಕಟ್ಟಲಾಗದು ಎಂದು ಕೊಹ್ಲಿ ಹೇಳಿದ್ದಾರೆ.