ಐಪಿಎಲ್ 2017: ಪುಣೆ ವಿರುದ್ಧ ಪಂಜಾಬ್‌ ಗೆ ಭರ್ಜರಿ ಗೆಲುವು

ಐಪಿಎಲ್‌ 10ನೇ ಆವೃತ್ತಿಯ 4ನೇ ಪಂದ್ಯದಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌...
ಕಿಂಗ್ಸ್‌ಇಲೆವೆನ್‌ ಪಂಜಾಬ್‌ ತಂಡ
ಕಿಂಗ್ಸ್‌ಇಲೆವೆನ್‌ ಪಂಜಾಬ್‌ ತಂಡ
Updated on: 
ಇಂದೋರ್‌: ಐಪಿಎಲ್‌ 10ನೇ ಆವೃತ್ತಿಯ 4ನೇ ಪಂದ್ಯದಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ವಿರುದ್ಧ ಕಿಂಗ್ಸ್‌ಇಲೆವೆನ್‌ ಪಂಜಾಬ್‌ 6 ವಿಕೆಟ್ ಗಳಿಂದ ಶನಿವಾರ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್‌ ಗೆದ್ದ ಪಂಜಾಬ್‌ ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪುಣೆ ಆರಂಭಿಕ ಆಘಾತ ಅನುಭವಿಸಿದರೂ ಬೆನ್ ಸ್ಟೋಕ್ಸ್(50) ಹಾಗೂ ಮನೋಜ್ ತಿವಾರಿ(40) ಉತ್ತಮ ಆಟದಿಂದಾಗಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 163 ರನ್‌ ಕಲೆಹಾಕಿದೆ.
ಗೆಲುವಿಗಾಗಿ ಪುಣೆ ನೀಡಿದ 164ರನ್ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡ, ಕ್ಯಾಪ್ಟನ್ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಡೆವಿಡ್ ಮಿಲ್ಲರ್ 78 ರನ್ ಗಳ ಉತ್ತಮ ಜೊತೆಯಾಟದ ನೆರವಿನೊಂದಿಗೆ ಗೆಲುವು ಸಾಧಿಸಿದೆ.
ಪುಣೆಯ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಅವರು ಸಂದೀಪ್ ಶರ್ಮಾ ಎಸೆತದಲ್ಲಿ ಮೊದಲ ಓವರಿನಲ್ಲೇ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಅಜಿಂಕ್ಯಾ ರಹನೆ(19) ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲ್ಲಿಲ್ಲ ಹೀಗಾಗಿ ಪುಣೆ ತಂಡ 164 ರನ್‌ ಗಳ ಸಾಧಾರಣ ಗುರಿಯನ್ನು ಪಂಜಾಬ್ ಗೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com