ಇಂದೋರ್: ಐಪಿಎಲ್ 10ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಕಿಂಗ್ಸ್‌ಇಲೆವೆನ್ ಪಂಜಾಬ್ ಗೆಲುವಿಗೆ 164ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪುಣೆ ಆರಂಭಿಕ ಆಘಾತ ಅನುಭವಿಸಿದರೂ ಬೆನ್ ಸ್ಟೋಕ್ಸ್(50) ಹಾಗೂ ಮನೋಜ್ ತಿವಾರಿ(40) ಉತ್ತಮ ಆಟದಿಂದಾಗಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿದೆ.
ಆರಂಭಿಕ ಮಾಯಾಂಕ್ ಅಗರ್ವಾಲ್ ಅವರು ಸಂದೀಪ್ ಶರ್ಮಾ ಎಸೆತದಲ್ಲಿ ಮೊದಲ ಓವರಿನಲ್ಲೇ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಅಜಿಂಕ್ಯಾ ರಹನೆ(19) ಸಹ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲ್ಲಿಲ್ಲ ಹೀಗಾಗಿ ಪುಣೆ ತಂಡ 164 ರನ್ ಗಳ ಸಾಧಾರಣ ಗುರಿಯನ್ನು ಪಂಜಾಬ್ ಗೆ ನೀಡಿದೆ.