ಗೇಯ್ಲ್ ಸಾಧನೆಯ ಖುಷಿಯನ್ನು ಗಂಗ್ನಮ್ ಡ್ಯಾನ್ಸ್ ಮೂಲಕ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ಅವರು ಸ್ಟೈಲ್ ಬದಲಿಸಿದ್ದಾರೆ. ಅದೇ ಸಾಲ್ಟ್ ಬೇ ಸ್ಟೈಲ್. ಕ್ರೀಡಾ ಕ್ಷೇತ್ರದಲ್ಲಿ ಇದೀಗ ಸಾಲ್ಟ್ ಬೇ ಸ್ಟೈಲ್ ಹೆಚ್ಚು ಪರಿಚಿತವಾಗಿದೆ. ಕೆಲ ದಿನಗಳ ಹಿಂದೆ ಆರ್ಸೆನಲ್ ಫುಟ್ಬಾಲಿಗ ಡ್ಯಾನಿ ಗೋಲು ಹೊಡೆದ ಸಂಭ್ರಮವನ್ನು ಇದೇ ರೀತಿ ಆಚರಿಸಿದ್ದರು.