ಪ್ಲೇ ಆಫ್ ಗೇರಲು ಆರ್ ಸಿಬಿಗೆ ಇನ್ನೂ ಇದೆ ಅವಕಾಶ!

ಸತತ ಸೋಲುಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 10 ಟೂರ್ನಿಯಿಂದಲೇ ಹೊರ ಬೀಳಲಿದೆ ಎಂಬ ವಾದದ ನಡುವೆಯೇ ಆರ್ ಸಿಬಿ ಗೂ ಪ್ಲೇ ಆಫ್ ಗೇರುವ ಅವಕಾಶವಿದೆ ಎಂಬ ವಾದ ಕೇಳಿಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸತತ ಸೋಲುಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 10 ಟೂರ್ನಿಯಿಂದಲೇ ಹೊರ ಬೀಳಲಿದೆ ಎಂಬ ವಾದದ ನಡುವೆಯೇ ಆರ್ ಸಿಬಿ ಗೂ ಪ್ಲೇ ಆಫ್ ಗೇರುವ ಅವಕಾಶವಿದೆ ಎಂಬ  ವಾದ ಕೇಳಿಬರುತ್ತಿದೆ.

ಐಪಿಎಲ್ 2017 ಟೂರ್ನಿಯ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಆರ್‌ಸಿಬಿಗೆ ಪ್ಲೇ-ಆಫ್ ಹಂತಕ್ಕೆ ಸ್ಪರ್ಧೆಯೊಡ್ಡುವ ಅವಕಾಶ ಈಗಲೂ ಇದ್ದು, ಆರ್‌ಸಿಬಿ ತಂಡ ಉಳಿದ ಎಲ್ಲ 5 ಪಂದ್ಯಗಳನ್ನು ಜಯಿಸಲೇ ಬೇಕಾದ  ಅನಿವಾರ್ಯತೆ ಇದೆ. ಅದೂ ಕೂಡ ಭಾರಿ ರನ್ ರೇಟ್ ಅಂತರದಲ್ಲಿ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸ್ತುತ 9 ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿದ್ದು, ಆರ್‌ಸಿಬಿ ತಂಡ ಉಳಿದ ಎಲ್ಲ 5 ಪಂದ್ಯಗಳನ್ನು ಜಯಿಸಿದರೆ  15 ಅಂಕ ಗಳಿಸುತ್ತದೆ. ಆಗ ಆರ್ ಸಿಬಿ ಅಗ್ರ-4ರಲ್ಲಿ ಸ್ಥಾನ ಪಡೆಯ ಬಹುದಾಗಿದೆ.  

ಆರ್‌ಸಿಬಿ ಮತ್ತೊಂದು ಸೋಲು ಅನುಭವಿಸಿದರೆ 13 ಅಂಕ ಗಳಿಸುತ್ತದೆ. ಆಗಲೂ ಪ್ಲೇ-ಆಫ್‌ಗೆ ತಲುಪುವ ಅವಕಾಶ ಮುಕ್ತವಾಗಿರುತ್ತದೆ.  ಈ ವರ್ಷದ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್  ತಂಡಗಳು ಅಂಕಪಟ್ಟಿಯಲ್ಲಿ ಈಗಾಗಲೇ ಮೊದಲ 2 ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದು, ಸನ್‌ ರೈಸರ್ಸ್ ಹೈದರಾಬಾದ್ 3ನೆ ಸ್ಥಾನದಲ್ಲಿದೆ. ಒಂದು ವೇಳೆ ಈ ಮೂರು ತಂಡಗಳು ಗೆಲುವಿನ ಓಟ ಮುಂದುವರಿಸಿದರೆ, ಉಳಿದ ತಂಡಗಳು  ಸೋಲು ಕಂಡರೆ, ಆರ್‌ಸಿಬಿ 13 ಅಂಕ ಗಳಿಸಿದರೆ ಮುಂದಿನ ಸುತ್ತಿಗೆ ತಲುಪಲು ಅವಕಾಶವಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com