ಪುಣೆ ವಿರುದ್ಧ ಸೋತ ಆರ್ಸಿಬಿ ಪ್ಲೇ-ಆಫ್ ರೇಸ್ ನಿಂದ ಔಟ್

ಐಪಿಎಲ್ 10ನೇ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಹೀನಾಯ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅಭಿಯಾನ...
ಆರ್ಸಿಬಿ
ಆರ್ಸಿಬಿ
ಪುಣೆ: ಐಪಿಎಲ್ 10ನೇ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಹೀನಾಯ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅಭಿಯಾನ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದೆ. 
ಪುಣೆಯ ಮಹಾರಾಷ್ಟ್ರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 61 ರನ್ ಗಳ ಹೀನಾಯ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುಣೆ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಗೆ ಆಲೌಟ್ ಆಯಿತು. 158 ರನ್ ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಬಿಟ್ಟರೆ ಮತ್ತೆಲ್ಲಾ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. 
ಬೆಂಗಳೂರು ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 96 ಗಳಿಸಿದ್ದು ಪುಣೆ ವಿರುದ್ಧ 61 ರನ್ ಗಳಿಂದ ಹೀನಾಯ ಸೋಲು ಕಂಡಿತು. ಇದರೊಂದಿಗೆ ಪ್ಲೇ-ಆಫ್ ರೇಸ್ ನಿಂದ ಬೆಂಗಳೂರು ತಂಡ ಹೊರಬಂದಿದೆ. ಐದು ಪಂದ್ಯಗಳಲ್ಲಿ 5ರಲ್ಲೂ ಗೆಲ್ಲಲೇಬೇಕಿದ್ದ ಅನಿವಾರ್ಯತೆ ಬೆಂಗಳೂರು ತಂಡಕ್ಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com