ಲಂಕಾ ವಿರುದ್ಧ ಮತ್ತೆ ಸಿಡಿದ ಶಿಖರ್ ಧವನ್, ವಿಶ್ವ ದಾಖಲೆ ನಿರ್ಮಾಣ!

ವಿಶ್ವದ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಕೀರ್ತಿಗೆ ಧವನ್ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡಂಬುಲಾ: ಶ್ರೀಲಂಕಾ ವಿರುದ್ಧ ಅಜೇಯ ಶತಕ ಸಿಡಿಸಿ ತರಂಗಾ ಪಡೆಯ ಹೀನಾಯ ಸೋಲಿಗೆ ಕಾರಣರಾಗಿದ್ದ ಭಾರತದ ಸ್ಫೋಟಕ ಬ್ಯಾಟ್ಸಮನ್ ಶಿಖರ್ ಧವನ್ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ವಿಶ್ವದ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನಿನ್ನೆ ಡಂಬುಲಾದ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶಿಖರ್ ಧವನ್ ಕೇವಲ 90 ಎಸೆತಗಳಲ್ಲಿ 132 ರನ್ ಗಳನ್ನು ಸಿಡಿಸಿದ್ದರು. ಧವನ್ ಜೊಕೆ ಗೂಡಿದ್ದ ನಾಯಕ ಕೊಹ್ಲಿ  ಕೂಡ 70 ಎಸೆತಗಲ್ಲಿ 82 ರನ್ ಸಿಡಿಸಿ ಭಾರತಕ್ಕೆ 9 ವಿಕೆಟ್ ಗಳ ಭರ್ಜರಿ ಜಯ ತಂದಿತ್ತಿದ್ಜರು. ಅಜೇಯ ಬ್ಯಾಟಿಂಗ್ ನೆರವಿನ ಮೂಲಕ ಭಾರತಕ್ಕೆ ಭರ್ಜರಿ ಜಯ ತಂದಿತ್ತ ಧಪನ್ ಇದೀಗ ದಾಖಲೆಯೊಂದನ್ನು ತಮ್ಮ ಬಗಲಿಗೆ  ಹಾಕಿಕೊಂಡಿದ್ದಾರೆ.

ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ತಮ್ಮ ಅದ್ಬುತ ಫಾರ್ಮ್ ಮುಂದುವರೆಸಿರುವ ಧವನ್ ಸತತ 6 ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದರು. ಆ ಮೂಲಕ ವಿಶ್ವ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50ಕ್ಕೂ ಹೆಚ್ಚು ರನ್  ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ. ಲಂಕಾ ವಿರುದ್ಧ ತಾವಾಡಿದ ಈ ಹಿಂದಿನ ಪಂದ್ಯಗಳಲ್ಲಿ ಧವನ್ ಕ್ರಮವಾಗಿ 94, 113, 79, 91, 125 ರನ್ ಗಳಿಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲೂ  ಕೂಡ ಧವನ್ ಅಜೇಯ 132 ರನ್ ಗಳಿಸಿದ್ದರು.

ಲಂಕಾ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕ ಡೀನ್ ಜೋನ್ಸ್, ಮಾಜಿ ಭಾರತೀಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಂಧು, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಪಾಕಿಸ್ತಾನದ ಸಯೀದ್ ಅನ್ವರ್ 5 ಬಾರಿ ಸತತ  50ಕ್ಕೂ ಹೆಚ್ಚು ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಧವನ್ 6ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸುವ ಈ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com