ಧೋನಿಯನ್ನು ಹಿಂದಿಕ್ಕಿದ ಕೊಹ್ಲಿ: 'ಯಾಹೂ' ಅತೀ ಹೆಚ್ಚು ಹುಡುಕಾಟದಲ್ಲಿ ವಿರಾಟ್ ನಂ.1!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅತೀ ಹೆಚ್ಚು ಹುಡುಕಾಟದಲ್ಲಿರುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅತೀ ಹೆಚ್ಚು ಹುಡುಕಾಟದಲ್ಲಿರುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದು ಇದೀಗ ಅಂತರ್ಜಾಲದ ಸರ್ಚ್ ಇಂಜಿನ್ ಯಾಹೂ ವಿನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೊಳಗಾದ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 
ಮಾಜಿ ನಾಯಕ ಎಂಎಸ್ ಧೋನಿ, ಪಿವಿ ಸಿಂಧು, ಗೌತಮ್ ಗಂಭೀರ್, ರವಿಶಾಸ್ತ್ರಿ, ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಎಸ್ ಶ್ರೀಶಾಂತ್, ರಾಬಿನ್ ಉತ್ತಮ ಮತ್ತು ಇರ್ಫಾನ್ ಪಠಾಣ್ ಅತಿ ಹೆಚ್ಚು ಹುಡುಕಾಟದ ಕ್ರೀಡಾಪಟುಗಳಾಗಿದ್ದಾರೆ. 
ಭಾರತೀಯರಿಗೆ ಹೋಲಿಸಿದರೇ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲ ಸ್ಥಾನದಲ್ಲಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com