ರೋಹಿತ್-ರಾಹುಲ್ ಭರ್ಜರಿ ಬ್ಯಾಟಿಂಗ್: ಟಿ20 ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ ರನ್ ಪೇರಿಸಿದ ಟೀಂ ಇಂಡಿಯಾ

ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ 260 ರನ್ ಪೇರಿಸುವ ಮೂಲಕ ಗರಿಷ್ಠ ರನ್ ದಾಖಲಿಸಿದ ಜಗತ್ತಿನ ಎರಡನೇ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ...
ರೋಹಿತ್ ಶರ್ಮಾ-ಕೆಎಲ್ ರಾಹುಲ್
ರೋಹಿತ್ ಶರ್ಮಾ-ಕೆಎಲ್ ರಾಹುಲ್
Updated on: 
ಇಂದೋರ್: ಟಿ20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ 260 ರನ್ ಪೇರಿಸುವ ಮೂಲಕ ಗರಿಷ್ಠ ರನ್ ದಾಖಲಿಸಿದ ಜಗತ್ತಿನ ಎರಡನೇ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ. 
ಇಂದೋರ್ ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಭರ್ಜರಿ ಆಟ ಪ್ರದರ್ಶಿಸಿದರು. ರೋಹಿತ್ ಶರ್ಮಾರ(118) ಭರ್ಜರಿ ಶತಕ ಹಾಗೂ ಕೆಎಲ್ ರಾಹುಲ್(89) ರನ್ ಗಳ ಸಹಾಯದೊಂದಿಗೆ ಭಾರತ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಪೇರಿಸಿದೆ. ಆ ಮೂಲಕ ಲಂಕಾಗೆ 261 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ. 
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 118, ಕೆಎಲ್ ರಾಹುಲ್ 89, ಎಂಎಸ್ ಧೋನಿ 28, ಹಾರ್ದಿಕ್ ಪಾಂಡ್ಯ 10 ರನ್ ಸಿಡಿಸಿದರು. 
ಲಂಕಾ ಪರ ಫರ್ನಾಂಡೋ ಹಾಗೂ ಪೆರೇರಾ ತಲಾ 2 ವಿಕೆಟ್ ಪಡೆದರೇ ಚಮೇರಾ 1 ವಿಕೆಟ್ ಪಡೆದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com