''ಆಗ ನನಗೆ 20 ವರ್ಷ ವಯಸ್ಸು. ಜಾಹೀರಾತುವೊಂದರ ಶೂಟಿಂಗ್ ಗಾಗಿ ಸೆಟ್ ಗೆ ಹೋಗಿದ್ದೆ. ಜಾಹೀರಾತಿನಲ್ಲಿ ನಟಿಸುವ ಸಲುವಾಗಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ನನಗಿಂತ ಮೊದಲೇ ಅಲ್ಲಿ ಬಂದು ಕುಳಿತಿದ್ದರು. ಯುವಿ ಅವರ ಪಕ್ಕದಲ್ಲಿ ರಿತಿಕಾ ಸಜ್ ದೇ ಕುಳಿತಿದ್ದರು. ಯುವಿ ನನ್ನೊಂದಿಗೆ ಮಾತು ಆರಂಭಿಸುವ ಮುನ್ನವೇ ರಿತಿಕಾಳನ್ನು ತೋರಿಸಿ, 'ಈಕೆ ನನ್ನ ತಂಗಿ ಸಮಾನ, ಈಕೆಯಿಂದ ದೂರ ಇರು' ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು,'' ಎಂದು ರೋಹಿತ್ ಹೇಳಿಕೊಂಡಿದ್ದಾರೆ.