
ಬೆಂಗಳೂರು: ಟಿ20 ಪಂದ್ಯದಲ್ಲಿ ದೆಹಲಿ ಕ್ರಿಕೆಟಿಗ ಮೋಹಿತ್ ಅಹ್ಲಾವತ್ ತ್ರಿಶತಕ ಸಿಡಿಸಿದ ಬೆನ್ನಲ್ಲೇ ಅಂತುಹುದೇ ಮತ್ತೊಂದು ದಾಖಲೆ ದಾಖಲಾಗಿದ್ದು, ಈ ಬಾರಿ ನೇಪಾಳದ ಅಂಧ ಕ್ರಿಕೆಟಿಗ ಧ್ವಿಶತಕ ಮಾಡಿದ ಸಾಧನೆ ಗೈದಿದ್ದಾನೆ.
ಭಾರತದಲ್ಲಿ ನಡೆಯುತ್ತಿರುವ ಅಂಧರ ಟಿ20 ವಿಶ್ವಕಪ್ ಸರಣಿಯಲ್ಲಿ ಗುರುವಾರ ನ್ಯೂಜಿಲೆಂಡ್ ತಂಡದ ವಿರುದ್ದ ನೇಪಾಳದ ಕ್ರಿಕೆಟಿಗ ಪದಮ್ ಬಹದ್ದೂರ್ ಬದೈಲಾ ಅಜೇಯ ದ್ವಿಶತಕ ಸಿಡಿಸಿದ್ದಾರೆ. ಕೇವಲ 90 ಎಸೆತಗಳಲ್ಲಿ ಬದೈಲಾ ಬರೊಬ್ಬರಿ 211 ರನ್ ಸಿಡಿಸಿದ್ದು, 36 ಬೌಂಡರಿಗಳನ್ನು ಭಾರಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ಸೋವರಂ ಧಂಗಿ ಅಜೇಯ 59 ರನ್ ಗಳಿಸಿದರು. ಮೊದಲ ಬ್ಯಾಟಿಂಗ್ ಮಾಡಿದ ನೇಪಾಳಕ್ಕೆ ಬದೈಲಾ ಮತ್ತು ಧಂಗಿ ಅತ್ಯುತ್ತಮ ಆರಂಭ ನೀಡಿದರು. ಇವರಿಬ್ಬರ ಅದ್ಬುತ ಪ್ರದರ್ಶನದಿಂದಾಗಿ ನೇಪಾಳ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ನಿಗದಿತ 20 ಓವರ್ ಗಳಲ್ಲಿ 315 ರನ್ ಕಲೆಹಾಕಿತು.
ಈ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ 19.1 ಓವರ್ ಗಳಲ್ಲಿ 174 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 141 ರನ್ ಗಳ ಐತಿಹಾಸಿಕ ಜಯ ದಾಖಲಿಸಿತು. ಇನ್ನು ಈ ಪಂದ್ಯದಲ್ಲಿ ಬದೈಲಾ ಗಳಿಸಿದ ದ್ವಿಶತಕ ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ ಸರಣಿಯ ಮೊದಲ ದ್ವಿಶತಕ ಎಂಬ ಖ್ಯಾತಿ ಗಳಿಸಿದೆ.
Advertisement