13 ವರ್ಷಗಳ ಬಳಿಕ ಮೊದಲ ಬಾರಿಗೆ ಜಾರ್ಖಂಡ್ ತಂಡದೊಂದಿಗೆ ರೈಲು ಪ್ರಯಾಣ ಮಾಡಿದ ಧೋನಿ!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸತತ 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ಮಾಡಿದ್ದಾರೆ. ಅದೂ ಕೂಡ ತಮ್ಮ ತವರು ಜಾರ್ಖಂಡ್ ಕ್ರಿಕೆಟ್ ತಂಡದ ಆಟಗಾರರೊಂದಿಗೆ..
ಇನ್ಸ್ ಟಾಗ್ರಾಮ್ ಚಿತ್ರ
ಇನ್ಸ್ ಟಾಗ್ರಾಮ್ ಚಿತ್ರ
Updated on: 

ರಾಂಚಿ: ಟೀಂ ಇಂಡಿಯಾದ  ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸತತ 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ಮಾಡಿದ್ದಾರೆ. ಅದೂ ಕೂಡ ತಮ್ಮ ತವರು  ಜಾರ್ಖಂಡ್  ಕ್ರಿಕೆಟ್ ತಂಡದ ಆಟಗಾರರೊಂದಿಗೆ..

ಈ ಹಿಂದೆ ಟೀ ಇಂಡಿಯಾ ನಾಯಕರಾಗಿದ್ದ ಧೋನಿ ನಿರಂತರ ಸರಣಿ ಹಾಗೂ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿದ್ದರು. ಹೀಗಾಗಿ ಅವರು ರೈಲು ಪ್ರಯಾಣ ಮಾಡುವಷ್ಟು ಸಮಯ ಸಿಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಧೋನಿ ಜಾರ್ಖಂಡ್  ತಂಡದ ಕ್ರಿಕೆಟ್ ಆಟಗಾರರೊಂದಿಗೆ ರೈಲು ಪ್ರಯಾಣ ಮಾಡಿದ್ದಾರೆ. 13 ವರ್ಷಗಳ ಬಳಿಕ ಧೋನಿ ರೈಲು ಪ್ರಯಾಣ ಮಾಡುವಂತೆ ಮಾಡಿದ್ದು ವಿಜಯ್ ಹಜಾರೆ ಟ್ರೋಫಿ..

ಹೌದು..ಐಪಿಎಲ್ ನಲ್ಲಿ ಪುಣೆ ತಂಡದ ನಾಯಕತ್ವ ಸ್ಥಾನದಿಂದ ತಮ್ಮನ್ನು ಕೆಳಗಿಳಿಸುತ್ತಿದ್ದಂತೆಯೇ ದೇಶೀ ಕ್ರಿಕೆಟ್ ನತ್ತ ಒಲವು ಹೆಚ್ಚಿಸಿಕೊಂಡಿರುವ ಧೋನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ನಾಯಕತ್ವ  ಜವಾಬ್ದಾರಿ ಹೊತ್ತಿದ್ದಾರೆ. ಇದೇ ಕಾರಣಕ್ಕಾಗಿ ಇದೇ ಫೆಬ್ರವರಿ 25ರಿಂದ ಕರ್ನಾಟಕದ ವಿರುದ್ಧ ನಡೆಯಲಿರುವ ಪಂದ್ಯಕ್ಕಾಗಿ ಧೋನಿ ತಂಡದ ಸಹ ಆಟಗಾರರೊಂದಿಗೆ ರೈಲಿನಲ್ಲಿ ಹೌರಾದತ್ತ ಪ್ರಯಾಣ ಮಾಡುತ್ತಿದ್ದಾರೆ. ರೈಲು  ಪ್ರಯಾಣದ ಚಿತ್ರವನ್ನು ಧೋನಿ ತಮ್ಮ ಇನ್ಸ್ ಟಾ ಗ್ರಾಮ್ ನಲ್ಲಿ ಹಾಕಿದ್ದು, ಇದೀಗ ಈ ಚಿತ್ರ ವ್ಯಾಪಕ ಸುದ್ದಿಯಾಗುತ್ತಿದೆ.

ಈ ಹಿಂದೆ ನ್ಯೂಜಿಲೆಂಡ್ ತಂಡದ ವಿರುದ್ಧ ಪಂದ್ಯದ ವೇಳೆ ತಮ್ಮ ಹಮ್ಮರ್ ಕಾರು ಚಲಾಯಿಸಿಕೊಂಡು ಮೈದಾನಕ್ಕೆ ಆಗಮಿಸಿ ಸುದ್ದಿ ಮಾಡಿದ್ದ ಧೋನಿ ಇದೀಗ ರೈಲು ಪ್ರಯಾಣದ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com