13 ವರ್ಷಗಳ ಬಳಿಕ ಗಂಗೂಲಿ ದಾಖಲೆ ಮುರಿದ ಎಬಿಡಿವಿಲಿಯರ್ಸ್!

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ 9 ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ 9 ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ.

ಹ್ಯಾಮಿಲ್ಟನ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಈ ಸಾಧನೆ ಮಾಡಿದ್ದು, ಎಬಿಡಿ 37 ರನ್ ಗಳಿಸುತ್ತಿದ್ದಂತೆಯೇ ಸೌರವ್ ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಹಿಂದೆ ಭಾರತದ ಮಾಜಿ ನಾಯಕ ಸೌರವ್  ಗಂಗೂಲಿ 228 ಇನ್ನಿಂಗ್ಸ್ ಗಳಲ್ಲಿ 98 ಸಾವಿರ ರನ್ ಪೂರೈಸಿದ್ದರೆ ಎಬಿಡಿ ಕೇವಲ 205 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರೈಸಿದ್ದರು. ಆ ಮೂಲಕ 13 ವರ್ಷಗಳ ಬಳಿಕ ಸೌರವ್ ಗಂಗೂಲಿ ದಾಖಲೆಯನ್ನು ಎಬಿಡಿ ಮುರಿದಿದ್ದಾರೆ.  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 9 ಸಾವಿರ ರನ್ ಪೂರೈಕೆಗಾಗಿ 235 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಕೇವಲ ಇನ್ನಿಂಗ್ಸ್ ಮಾತ್ರವಷ್ಟೇ ಅಲ್ಲದೇ ಎಸೆತಗಳಲ್ಲೂ ಎಬಿಡಿ ದಾಖಲೆ ನಿರ್ಮಿಸಿದ್ದು, 9000 ಸಾವಿರ ರನ್ ಪೂರೈಕೆಗಾಗಿ ಎಬಿಡಿ ಎದುರಿಸಿದ್ದು ಕೇವಲ 9005 ಎಸೆತಗಳಷ್ಟೇ ಅಂತೆ. ಈ ಹಿಂದೆ ಆಸ್ಟ್ರೇಲಿಯಾದ ಸ್ಫೋಟಕ  ಬ್ಯಾಟ್ಸಮನ್ ವಿಕೆಟ್ ಕೀಪರ್ ಅ್ಯಡಂ ಗಿಲ್ ಕ್ರಿಸ್ಟ್ 9 ಸಾವಿರ ರನ್ ಪೂರೈಕೆಗಾಗಿ 9328 ಎಸೆತಗಳನ್ನು ಎದುರಿಸಿದ್ದರು.

ಅತ್ಯಂತ ಕಡಿಮೆ ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಪೂರೈಸಿದ ಮೊದಲ ದಕ್ಷಿಣ ಆಫ್ರಿಕಾ ಆಟಗಾರ
ಇದೇ ವೇಳೆ ಎಬಿಡಿ 9 ಸಾವಿರ ರನ್ ಪೂರೈಸಿದ 2ನೇ ಮತ್ತು ಕಡಿಮೆ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಈ ಹಿಂದೆ ಆಫ್ರಿಕಾದ ಜಾಕಸ್ ಕಾಲಿಸ್ 242 ಇನ್ನಿಂಗ್ಸ್ ಗಳಲ್ಲಿ 9  ಸಾವಿರ ರನ್ ಪೂರೈಸಿದ್ದರು. ಇನ್ನು ಎಬಿಡಿ ಅವರ ಈ 9 ಸಾವಿರ ರನ್ ಗಳಲ್ಲಿ 24 ಶತಕಗಳು ದಾಖಲಾಗಿದ್ದು, ಸಚಿನ್ 9 ಸಾವಿರ ರನ್ ಪೂರೈಸುವ ವೇಳೆ 25 ಶತಕಗಳನ್ನು ಸಿಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com