ಪುಣೆಯಲ್ಲಿ ಸ್ಪಿನ್ ಪಿಚ್ ತಯಾರಿಸಿದ್ದೆ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಯ್ತೆ?

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನವನ್ನು ಸ್ಪಿನ್ ಪಿಚ್ ಆಗಿ ಪರಿವರ್ತಿಸಿದ್ದೆ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಯಿತು ಎಂಬ ಮಾತುಗಳು...
ಪುಣೆ ಮೈದಾನ
ಪುಣೆ ಮೈದಾನ
ಪುಣೆ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನವನ್ನು ಸ್ಪಿನ್ ಪಿಚ್ ಆಗಿ ಪರಿವರ್ತಿಸಿದ್ದೆ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಯಿತು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಇದೀಗ ಕೇಳಿಬರುತ್ತಿದೆ. 
ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಉದ್ದೇಶದೊಂದಿಗೆ ಪುಣೆಯ ಪಿಚ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪಕ್ಕಾ ಸ್ಪಿನ್ ಪಿಚ್ ಆಗಿಸಿದ್ದೆ ಕಾರಣ ಎಂದು ಹೇಳಿದೆ. 
ಪುಣೆಯ ಪಿಚ್ ಅನ್ನು ಸ್ಪಿನ್ ಪಿಚ್ ಮಾಡಲು ಬಿಸಿಸಿಐ ಆಡಳಿತವೇ ಸ್ಥಳೀಯ ಕ್ಯುರೇಟರ್ ಮೇಲೆ ಭಾರೀ ಒತ್ತಡ ಹೇರಿತ್ತು. ಇದನ್ನು ಕ್ಯುರೇಟರ್ ಒಪ್ಪದಿದ್ದಾಗ ಬಿಸಿಸಿಐನ ಕ್ಯುರೇಟರ್ ರಿಂದಲೇ ಒತ್ತಡ ಹೇರಿಸಲಾಗಿದೆ. ಇದಕ್ಕೂ ಸ್ಥಳೀಯ ಕ್ಯುರೇಟರ್ ಒಪ್ಪದಿದ್ದಾಗ ಬಿಸಿಸಿಐ ಆಡಳಿತವೇ ನೇರವಾಗಿ ಮಧ್ಯಪ್ರವೇಶ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 
ಇನ್ನು ಸ್ಪಿನ್ ಪಿಚ್ ಮಾಡಲು ಹೋದ ಪರಿಣಾಮ ಪಿಚ್ ನಲ್ಲಿದ್ದ ಹುಲ್ಲನ್ನೆಲ್ಲ ಕಿತ್ತೆಸಯಲಾಯಿತು. ಪಂದ್ಯ ಶುರವಾಗುವುದಕ್ಕೂ ಎಂಟು ದಿನದ ಹಿಂದಿನವರೆಗೆ ಪಿಚ್ ಗೆ ನೀರನ್ನೇ ಹಾಯಿಸಿರಲಿಲ್ಲವೆಂದು ಹೇಳಲಾಗಿದೆ. ಒಟ್ಟಾರೆ ಆಸ್ಟ್ರೇಲಿಯಾವನ್ನು ಸ್ಪಿನ್ ಖೆಡ್ಡಾದಲ್ಲಿ ಬೀಳಿಸಲು ಹೋಗಿ ಭಾರತ ತಾನೇ ಆ ಖೆಡ್ಡಾದಲ್ಲಿ ಬಿದ್ದಂತಾಗಿದೆ. 
ಇದೇ ವೇಳೆ ಪಿಚ್ ಪರಿಶೀಲನೆ ನಡೆಸಿದ್ದ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಪಿಚ್ 1ನೇ ದಿನದ ರೀತಿ ಇದ್ದಂತಿಲ್ಲ. 8ನೇ ದಿನದ ರೀತಿ ಇದ್ದಂತಿದೆ. ಅಷ್ಟು ಕೆಟ್ಟದಾಗಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com