ಭಾರತವನ್ನು ಮಣಿಸಲು ಆಸ್ಟ್ರೇಲಿಯಾಗೆ ನೆರವಾಗಿದ್ದು ಭಾರತೀಯನ ಸಲಹೆ!

ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಭಾರತ ವಿರುದ್ಧ ಭರ್ಜರಿ ಜಯಗಳಿಸಿದ್ದು, ಇಂತಹ ಯಶಸ್ಸಿಗೆ ಭಾರತೀಯನ ಸಲಹೆ ಕಾರಣವಾಗಿದೆ...
ಶ್ರೀಧರನ್ ಶ್ರೀರಾಮ್
ಶ್ರೀಧರನ್ ಶ್ರೀರಾಮ್
Updated on: 
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಭಾರತ ವಿರುದ್ಧ ಭರ್ಜರಿ ಜಯಗಳಿಸಿದ್ದು, ಇಂತಹ ಯಶಸ್ಸಿಗೆ ಭಾರತೀಯನ ಸಲಹೆ ಕಾರಣವಾಗಿದೆ. 
ಆಸ್ಟ್ರೇಲಿಯಾ ತಂಡದ ಸ್ಪಿನ್ ಕೋಚ್ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಚೆನ್ನೈನ ಶ್ರೀಧರನ್ ಶ್ರೀರಾಮ್ ಆಗಿದ್ದು ಅವರು ನೀಡಿದ ಸಲಹೆ ಟೀಂ ಇಂಡಿಯಾವನ್ನು ಕಳಪೆ ಮೊತ್ತಕ್ಕೆ ಆಲೌಟ್ ಮಾಡಲು ಸಾಧ್ಯವಾಯಿತು. 
ಇನ್ನು ಭಾರತದ 12 ವಿಕೆಟ್ ಕಬಳಿಸಿ ತಂಡದ ಜಯಕ್ಕೆ ಕಾರಣನಾದ ಆಸೀಸ್ ನ ಸ್ಟೀವ್ ಒ ಕೀಫ್ ಬೌಲಿಂಗ್ ಯಶಸ್ಸಿನ ಹಿಂದೆಯೂ ಶ್ರೀಧರನ್ ಪಾತ್ರವಿದೆ. ಇದನ್ನು ಒ ಕೀಫ್ ಕೂಡ ಒಪ್ಪಿಕೊಂಡಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಧರನ್ ಆಸ್ಟ್ರೇಲಿಯಾ ಆಟಗಾರರು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಾರೆ. ಹಾಗೇ ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಾರೆ. ಇದು ಅವರ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com