ವಾಸಿಂ ಅಕ್ರಂ
ವಾಸಿಂ ಅಕ್ರಂ

ಮಾಜಿ ವೇಗಿ ವಾಸಿಂ ಅಕ್ರಂ ವಿರುದ್ಧ ಬಂಧನ ವಾರೆಂಟ್

ಪ್ರಕರಣ ಸಂಬಂದ ನ್ಯಾಯಾಲಯಕ್ಕೆ ಹಾಜರಾಗದ ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಂ ಅವರನ್ನು ಬಂಧಿಸುವಂತೆ ಕರಾಚಿ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ...

ಕರಾಚಿ: ಪ್ರಕರಣ ಸಂಬಂದ ನ್ಯಾಯಾಲಯಕ್ಕೆ ಹಾಜರಾಗದ ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಂ ಅವರನ್ನು ಬಂಧಿಸುವಂತೆ ಕರಾಚಿ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಅನ್ನು ಹೊರಡಿಸಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವಾಸಿಂ ಅಕ್ರಂ ವಿರುದ್ಧ ಗುಂಡಿನ ದಾಳಿ ನಡೆದಿದೆ ಎಂಬ ಅಕ್ರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ದಾಖಲಾದ ನಂತರ ವಾಸಿಂ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಿರಲಿಲ್ಲ. ಇದರಿಂದಾಗಿ ಕೋರ್ಟ್ 31 ಬಾರಿ ಅಕ್ರಂಗೆ ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿತ್ತು.

ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗುತ್ತಿದ್ದ ವಾಸಿಂ ಅಕ್ರಂ ವಿರುದ್ಧ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದ್ದು ಜನವರಿ 17ರಂದು ವಾಸಿಂ ನ್ಯಾಯಾಲಯಕ್ಕೆ ಹಾಜರಾಲೇಬೇಕಾದ ಪರಿಸ್ಥಿತಿ ಎದುರಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com