ವಿರಾಟ್ ಕೊಹ್ಲಿ
ಕ್ರಿಕೆಟ್
ಕೊಹ್ಲಿಯ ಆ ಸಿಕ್ಸರ್‌ಗೆ ಅರೆ ಕ್ಷಣ ದಂಗಾದ ಕಾಮೆಂಟೆಟರ್ಸ್
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಹೊಡೆತಗಳೆ ಆಗಿರುತ್ತವೆ. ಅವರ ಬ್ಯಾಟ್ ನಿಂದ ಬರುವ ಒಂದೊಂದು ಹೊಡೆತವೂ ಮನಮೋಹಕ...
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಹೊಡೆತಗಳೆ ಆಗಿರುತ್ತವೆ. ಅವರ ಬ್ಯಾಟ್ ನಿಂದ ಬರುವ ಒಂದೊಂದು ಹೊಡೆತವೂ ಮನಮೋಹಕ. ಅತಂಹ ಒಂದು ಹೊಡೆತ ಕೊಹ್ಲಿಯ ಬ್ಯಾಟ್ ನಿಂದ ಚಿಮ್ಮಿದ್ದು ಆ ಹೊಡೆತಕ್ಕೆ ಕಾಮೆಂಟೆಟರ್ಸ್ ಗಳೇ ಮೂಖವಿಸ್ಮಿತರಾದರು.
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ 122 ರನ್ ಗಳಿಸಿದರು. ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಇಂಗ್ಲೆಂಡ್ ವೇಗಿ ಕ್ರಿಸ್ ವೋಕರ್ಸ್ ಎಸೆತವನ್ನು ಸಿಕ್ಸರ್ ಬೌಂಡರಿಗೆ ಹೊಡೆದರು.
ಕೊಹ್ಲಿ ಹೊಡೆತ ಸಿಕ್ಸರ್ ಆಗಬಹುದು ಎಂದು ಯಾರಿಗೂ ಗೊತ್ತಾಗಲೇ ಇಲ್ಲ. ಮಾಮೂಲು ಸ್ಟ್ರೈಟ್ ಡ್ರೈವ್ ನಂತೆ ಹೊಡೆದು ಬಿಟ್ಟರು. ಆ ಚೆಂಡು ಆಗಸದಲ್ಲಿ ಹಾರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಿತ್ತು. ಈ ವೇಳೆ ಕಾಮೆಂಟರಿ ಹೇಳುತ್ತಿದ್ದರೂ ಅರೆಕ್ಷಣ ದಂಗಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ