ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಸಿಸಿಐಗೆ ಸೌರವ್ ಗಂಗೂಲಿ ಅಧ್ಯಕ್ಷ!

ಭಾರತ ತಂಡದ ಮಾಜಿ ನಾಯಕ ಹಾಗೂ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಂತೆ...!
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಂತೆ...!

ಅರೆ ಇದೇನಿದು....ದಾದಾ ಯಾವಾಗ ಬಿಸಿಸಿಐಗೆ ಅಧ್ಯಕ್ಷರಾಗಿ ಆಯ್ಕೆಯಾದರೂ ಎಂದು ಚಿಂತಿಸಬೇಡಿ...ಇದು ವಿಕಿಪೀಡಿಯಾ ಎಡವಟ್ಟು...ಖ್ಯಾತ ಅಂತರ್ಜಾಲ ಮಾಹಿತಿ ತಾಣ ವಿಕಿಪೀಡಿಯಾ ತನ್ನ ವೆಬ್ ಸೈಟಿನಲ್ಲಿ ಬಿಸಿಸಿಐ  ಅಧ್ಯಕ್ಷ ಸೌರವ್ ಗಂಗೂಲಿ ಎಂದು ನಮೂದಿಸಿದೆ...ಅಷ್ಟು ಮಾತ್ರವಲ್ಲದೇ ಸುಪ್ರೀಂ ಆದೇಶದಿಂದ ವಜಾಗೊಂಡಿದ್ದ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿನ್ನೂ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ ಎಂದು ತಾಣದಲ್ಲಿ  ನಮೂದಿಸಲಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು...ಇದು ವ್ಯಾಪಕ ಸುದ್ದಿಯಾಗುತ್ತಿದೆ...



ಸುಪ್ರೀಂ ಕೋರ್ಟ್ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಅನುರಾಗ್ ಠಾಕೂರ್ ಅವರನ್ನು ವಜಾ ಮಾಡಿತ್ತು. ಅವರ ವಜಾ ಬಳಿಕ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ದಿಗ್ಗಜರು ಸೌರವ್  ಗಂಗೂಲಿ ಪರ ಬ್ಯಾಟ್ ಮಾಡಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಬಳಿಕ ಗಂಗೂಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ರಿಕೆಟ್ ಒಳ-ಹೊರ ವಿಚಾರಗಳನ್ನು ಬಹಳ ಹತ್ತಿರದಿಂದ ಕಂಡಿರುವ ಗಂಗೂಲಿ ಬಿಸಿಸಿಐನ  ಅಧ್ಯಕ್ಷ ಗಾದಿಗೇರಲು ಸಮರ್ಥರು ಎಂಬ ಅಭಿಪ್ರಾಯ ಮೂಡಿಬಂದಿತ್ತು.

ಇದೇ ಮೊದಲಲ್ಲ ವಿಕಿ ಯಡವಟ್ಟು...
ಅಂತರ್ಜಾಲ ಮಾಹಿತಿ ತಾಣ ವಿಕಿ ಪೀಡಿಯಾ ಯಡವಟ್ಟು ಇದೇ ಮೊದಲೇನಲ್ಲ...ಈ ಹಿಂದೆ ಸಾಕಷ್ಟು ಬಾರಿ ತಪ್ಪು ಮಾಹಿತಿಗಳ ಮೂಲಕ ಸುದ್ದಿಗೆ ಗ್ರಾಸವಾಗಿತ್ತು. 2009 ಜನವರಿಯಲ್ಲಿ ಅಮೆರಿಕ ಸೆನೆಟರ್ ಎಡ್ವರ್ಡ್ ಕೆನಡಿ ಸಾವಿನ  ಕುರಿತಂತೆ ತಪ್ಪು ಮಾಹಿತಿ ನೀಡಲಾಗಿತ್ತು. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಇದನ್ನು ಸರಿಪಡಿಸಲಾಗಿತ್ತು. ಇನ್ನು ಇತ್ತೀಚಿನ ಉದಾಹರಣೆ ಹೇಳುವುದಾದರೆ ಕನ್ನಡ ಅವತರಣಿಕೆಯ ವಿಕಿಪಿಡೀಯಾದಲ್ಲಿ ಕೇಂದ್ರ  ಸಚಿವ ಡಿವಿ ಸದಾನಂದಗೌಡ ಅವರನ್ನು ರೈಲ್ವೇ ಸಚಿವರಾಗಿ ಮುಂದುವರೆಸಲಾಗಿದೆ. ಇಂಗ್ಲಿಷ್ ಅವತರಣಿಕೆಯ ಪುಟದಲ್ಲಿ ಸದಾನಂದಗೌಡರ ಬಗೆಗಿನ ಅಂಶಗಳು ಸರಿ ಇದೆಯಾದರೂ, ಕನ್ನಡದಲ್ಲಿ ಮಾತ್ರ ಅದೇಕೋ ಈ ವರೆಗೂ  ಅದನ್ನು ತಿದ್ದುವ ಪ್ರಯತ್ನವಾಗಿಲ್ಲ.

ವಿಕಿಪೀಡಿಯಾದಲ್ಲಿ ರಿಜಿಸ್ಟರ್ ಆಗುವ ಮೂಲಕ ಯಾರು ಬೇಕಾದರೂ ಮಾಹಿತಿ ಅಥವಾ ವಿಷಯಗಳನ್ನು ಬರೆಯಬಹುದು ಮತ್ತು ತಿದ್ದುಪಡಿ ಮಾಡಬಹುದಾಗಿದೆ. ಹೀಗಾಗಿಯೇ ಈ ಯಟವಟ್ಟುಗಳು ಎಂಬುದು ಮತ್ತೊಂದು ಬಣದ  ವಾದ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com