ಬಿಸಿಸಿಐಗೆ ದ್ವಿಸದಸ್ಯರ ಸಮಿತಿ ಶಿಫಾರಸ್ಸಿನ ಹೆಸರುಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿ ಸಿ ಸಿ ಐ) ಆಡಳಿತಕ್ಕಾಗಿ ಇಬ್ಬರು ಸದಸ್ಯರ ಸಮಿತಿ ಶಿಫಾರಸ್ಸು ಮಾಡಿದ್ದ ಹೆಸರುಗಳನ್ನೂ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿ ಸಿ ಸಿ ಐ) ಆಡಳಿತಕ್ಕಾಗಿ ಇಬ್ಬರು ಸದಸ್ಯರ ಸಮಿತಿ ಶಿಫಾರಸ್ಸು ಮಾಡಿದ್ದ ಹೆಸರುಗಳನ್ನೂ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. 
ಜನವರಿ ೨೦ ರೊಳಗೆ ಬಿಸಿಸಿಐ ಆಡಳಿತ ಮಂಡಳಿಗೆ ೭೦ ವರ್ಷದೊಳಗಿನ ಪ್ರಾಮಾಣಿಕ ಆರು ಸದಸ್ಯರನ್ನು ನೇಮಿಸಲು  ವಕೀಲರಾದ ಅನಿಲ್ ಬಿ ದಿವಾನ್ ಮತ್ತು ಗೋಪಾಲ್ ಸುಬ್ರಮಣ್ಯಮ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. 
ದ್ವಿಸದಸ್ಯ ಸಮಿತಿ ಮುಚ್ಚಿದ ಲಕೋಟೆಯಲ್ಲಿ ೯ ಜನ ಸದಸ್ಯರ ಹೆಸರನ್ನು ಸಲ್ಲಿಸಿತ್ತು ಆದರೆ ಅವರಲ್ಲಿ ಕೆಲವರು ೭೦ ವರ್ಷ ಮೀರಿದ್ದರಿಂದ ಸುಪ್ರೀಂ ಕೋರ್ಟ್ ಈ ಪಟ್ಟಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. 
ಈ ಮಧ್ಯೆ ಬಿಸಿಸಿಐ ಹೊಸ ಹೆಸರುಗಳನ್ನು ಸೂಚಿಸಲು ತನಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಕೋರಿದೆ. 
ಹಾಗೆಯೇ ಅಟಾರ್ನಿ ಜನರಲ್ಲಿ ಮುಕುಲ್ ರೊಹ್ತಾಗಿ ಅವರು ಬಿಸಿಸಿಐ ಆಡಳಿತ ಮಂಡಳಿಗೆ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಎರಡು ವಾರ ತಡ ಮಾಡುವಂತೆ ಕೋರಿದ್ದಾರೆ. ರೈಲ್ವೇಸ್, ಸರ್ವಿಸರ್ ಮತ್ತು ವಿಶ್ವವಿದ್ಯಾಲಯ ಸಂಘಟನೆಗಳಿಗೆ ಸಂಪೂರ್ಣ ಸದಸ್ಯತ್ವ ನೀಡಲು ನಿರಾಕರಿಸದ್ದ ಜನವರಿ ೨೦ರ ತೀರ್ಪನ್ನು ಮರುಪರಿಗಣಿಸುವಂತೆಯೂ ಅವರು ಕೋರಿದ್ದಾರೆ. 
ಜನವರಿ ೨ ರಂದು ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಮತ್ತು ಕಾರ್ಯದರ್ಶಿ ಅಜಯ್ ಶಿಕ್ರೆ ಅವರನ್ನು ವಜಾಗೊಳಿಸಿ, ಇವರು ಕ್ರಿಕೆಟ್ ಮಂಡಳಿಯ ಆಡಳಿತಕ್ಕ ಅಗತ್ಯವಾದ ಪಾರದರ್ಶಕತೆ ಒದಗಿಸಲು ವಿಫಲರಾಗಿದ್ದಾರೆ ಮತ್ತು ಕೋರ್ಟ್ ನ ಜುಲೈ ೧೮ ೨೦೧೬ ರ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com