ಗಾಲೆ ಟಸ್ಟ್: 240 ರನ್ ಗಳಿಗೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಲಂಕಾಗೆ 550 ರನ್ ಗಳ ಬೃಹತ್ ಗುರಿ

ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ 240 ರನ್ ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಕೊಂಡಿದ್ದು, ಲಂಕಾಗೆ ಗೆಲ್ಲಲು 550 ರನ್ ಗಳ ಬೃಹತ್ ಗುರಿ ನೀಡಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಗಾಲೆ: ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ 240 ರನ್ ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಕೊಂಡಿದ್ದು, ಲಂಕಾಗೆ ಗೆಲ್ಲಲು 550 ರನ್ ಗಳ ಬೃಹತ್ ಗುರಿ ನೀಡಿದೆ.

ಶುಕ್ರವಾರ ಶ್ರೀಲಂಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 291 ರನ್‌ಗಳಿಗೆ ಕಟ್ಟಿಹಾಕಿದ್ದ ಭಾರತದ ಬೌಲರ್‌ಗಳು ತಂಡಕ್ಕೆ 309 ರನ್‌ಗಳ ಬೃಹತ್ ಮುನ್ನಡೆ ತಂದುಕೊಟ್ಟರು. ಎರಡನೇ ಇನಿಂಗ್ಸ್‌ನಲ್ಲಿ ಭಾರತ ದಿನದಾಟದ  ಮುಕ್ತಾಯದ ವೇಳೆ ಮೂರು ವಿಕೆಟ್‌ಗಳಿಗೆ 189 ರನ್‌ ಗಳಿಸಿತ್ತು. ಈ ಮೂಲಕ ಒಟ್ಟಾರೆ 498 ರನ್‌ಗಳ ಮುನ್ನಡೆ ಸಾಧಿಸಿತ್ತು.

ಇಂದು ನಾಲ್ಕನೇ ದಿನದಾಟ ಮುಂದುವರಿಸಿದ ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟು 136 ಎಸೆತಗಳನ್ನು ಎದುರಿಸಿಕೊಹ್ಲಿ 5 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್  ಮೂಲಕ 103 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿಗೆ ಇದು 17ನೇ ಶತಕವಾಗಿದೆ.

ಅಂತೆಯೇ ಭಾರತ 53 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 240ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದು, ಶ್ರೀಲಂಕಾದ ತಂಡಕ್ಕೆ 550 ರನ್‌ಗಳ ಟಾರ್ಗೆಟ್‌ ನೀಡಿದೆ. ನಿನ್ನೆ ಅಜೇಯರಾಗಿ ಉಳಿದು 76 ರನ್ ಗಳಿಸಿ ಬ್ಯಾಟಿಂಗ್‌ನ್ನು  ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದ ಕೊಹ್ಲಿ ಇಂದು ಭರ್ಜರಿ ಶಾಟ್ ಗಳ ಮೂಲಕ ಆಕರ್ಷಕ ಶತಕ ಸಿಡಿಸಿದರು. ಕೊಹ್ಲಿಗೆ ಅಜಿಂಕ್ಯಾ ರಹಾನೆ ಉತ್ತಮ ಸಾಥ್ ನೀಡಿದರು. ರಹಾನೆ ಅಜೇಯ 23 ರನ್ ಗಳಿಸಿದರು.

ಲಂಕನ್ನರಿಗೆ ಆರಂಭಿಕ ಆಘಾತ
ಇನ್ನು ಭಾರತ ನೀಡಿದ 550 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದು, ಶ್ರೀಲಂಕಾ ತಂಡ ಕೇವಲ 29 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಉತ್ತಮವಾಗಿ  ಆಡುತ್ತಿದ್ದ ಲಂಕಾ ಆರಂಭಿಕ ಉಪುಲ್ ತರಂಗಾರನ್ನು ಭಾರತದ ಬೌಲರ್ ಶಮಿ 3ನೇ ಓವರ್ ನಲ್ಲೇ ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಗುಣತಿಲಕ ಕೂಡ ಕೇವಲ 2 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್ ನಲ್ಲಿ  ಪೂಜಾರಾಗೆ ಕ್ಯಾಚಿತ್ತು ಹೊರ ನಡೆದರು. ಆ ಮೂಲಕ ಪಂದ್ಯದ ಮೇಲೆ ಭಾರತ ಬಿಗಿ ಹಿಡಿತ ಸಾಧಿಸಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com