
ಕಾರ್ಡಿಫ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಕೀಬ್ ಅಲ್ ಹಸನ್ ಮತ್ತು ಮಹಮದುಲ್ಲಾ ಜೋಡಿಯ ಜೊತೆಯಾಟ ಹೊಸದೊಂದು ದಾಖಲೆ ಬರೆದಿದೆ.
ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲೇ ಈ ಜೋಡಿ ಗಳಿಸಿದ 224 ರನ್ ಜೊತೆಯಾಟ ಬಾಂಗ್ಲಾದೇಶ ಕ್ರಿಕೆಟ್ ನ ಅತೀ ದೊಡ್ಡ ಏಕದಿನ ಜೊತೆಯಾಟವಾಗಿ ದಾಖಲಾಗಿದೆ. 5ನೇ ವಿಕೆಟ್ ಗೆ ಜೊತೆಯಾದ ಶಕೀಬ್ ಹಾಗೂ ಮಹಮದುಲ್ಲಾ ಜೋಡಿ ಕೇವಲ 209 ಎಸೆತಗಳನ್ನು ಎದುರಿಸಿ ಬರೊಬ್ಬರಿ 224 ರನ್ ಸಿಡಿಸಿತ್ತು. ಈ ಪೈಕಿ ಶಕೀಬ್ 111 ರನ್ ಗಳಿಸಿದ್ದರೆ, ಮಹಮದುಲ್ಲಾ 98 ರನ್ ಗಳಿಸಿದ್ದರು.
ಇದಕ್ಕೂ ಮೊದಲು 2015ರಲ್ಲಿ ಢಾಕಾದಲ್ಲಿ ಮುಷ್ಫಿಕರ್ ರೆಹಮಾನ್ ಮತ್ತು ತಮೀಮ್ ಇಕ್ಬಾಲ್ ಅವರ ಜೋಡಿ 178 ರನ್ ಗಳಿಸಿತ್ತು. ಪಾಕಿಸ್ತಾನದ ವಿರುದ್ಧ ನಡೆದ ಈ ಪಂದ್ಯದಲ್ಲಿ ಈ ಜೋಡಿ ದಾಖಲಿಸಿದ್ದ ರನ್ ಗಳಿಕೆ ಬಾಂಗ್ಲಾದೇಶದ ಪರ ಅತೀ ದೊಡ್ಡ ಜೊತೆಯಾಟವಾಗಿ ದಾಖಲಾಗಿತ್ತು. ಅಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 79 ರನ್ ಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಕೀಬ್ ಮತ್ತು ಮಹಮದುಲ್ಲಾ ಜೋಡಿ ಈ ದಾಖಲೆಯನ್ನು ಅಳಿಸಿ ಹಾಕಿದೆ.
Advertisement