"ಬಾಪ್ ಕೌನ್ ಹೇ" ಎಂದ ಪಾಕ್ ಅಭಿಮಾನಿ ವಿರುದ್ಧ ಶಮಿ ಗರಂ, ಧೋನಿ ಅಡ್ಡಿ ಬರದೇ ಇದ್ದಿದ್ದರೆ?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ ಪಂದ್ಯದ ಪಾಕಿಸ್ತಾನ ಅಭಿಮಾನಿಯೋರ್ವ ಭಾರತೀಯ ಆಟಗಾರರನ್ನು ಕೆಣಕಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಪಾಕ್ ಅಭಿಮಾನಿ ವಿರುದ್ಧ ಶಮಿ ಗರಂ
ಪಾಕ್ ಅಭಿಮಾನಿ ವಿರುದ್ಧ ಶಮಿ ಗರಂ
Updated on

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ ಪಂದ್ಯದ ಪಾಕಿಸ್ತಾನ ಅಭಿಮಾನಿಯೋರ್ವ ಭಾರತೀಯ ಆಟಗಾರರನ್ನು ಕೆಣಕಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಪಂದ್ಯದ ಬಳಿಕ ಮೈದಾನದಿಂದ ಡ್ರೆಸಿಂಗ್ ರೂಂಗೆ ಆಗಮಿಸುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಕೆಲ ಕಿಡಿಗೇಡಿ ಪಾಕಿಸ್ತಾನಿ ಅಭಿಮಾನಿಗಳು ಕೆಣಕಿದ್ದಾರೆ.


ಆಟಗಾರರು ತೆರಳುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೋರ್ವ  ಆಟಗಾರರನ್ನು ಉದ್ದೇಶಿಸಿ "ಬಾಪ್ ಕೌನ್ ಹೇ"...ಬಾರ್ ಕೌನ್ ಹೇ ಎಂದು ಪದೇ ಪದೇ ಕೇಳುತ್ತಿದ್ದರಿಂದ ಭಾರತದ ಕ್ರಿಕೆಟಿಗ ಮಹಮದ್ ಶಮಿ ಕೋಪಗೊಂಡು ಆತನ ಬಳಿ ತೆರಳಿ ಮಾತಿನ ಸಮರಕ್ಕೆ ಮುಂದಾದರು. ಈ ವೇಳೆ  ಅವರ ಹಿಂದೆಯೇ ಇದ್ದ ಧೋನಿ ಶಮಿಯನ್ನು ಸಮಾಧಾನಗೊಳಿಸಿ ಡ್ರೆಸಿಂಗ್ ರೂಂಗೆ ಕರೆದೊಯ್ದರು.

ಈ ಹಿಂದೆ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದ ವಿಡಿಯೋ ಈಗ ವೈರಲ್ ಆಗಿತ್ತು. ಇದೀಗ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನದ  ಅಭಿಮಾನಿಯೋರ್ವ ಕೆಣಕಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com