ಡ್ರೆಸಿಂಗ್ ರೂಮ್ "ಪಾವಿತ್ರ್ಯತೆ" ಕಾಪಾಡಬೇಕು: ವಿರಾಟ್ ಕೊಹ್ಲಿ

ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವ ಬೆನ್ನಲ್ಲೇ ಇಷ್ಟು ದಿನ ಸುಮ್ಮನ್ನಿದ್ದ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ತಂಡದ ಡ್ರೆಸಿಂಗ್ ರೂ ಪಾವಿತ್ರ್ಯತೆಯನ್ನು ನಾವು ನಿರ್ವಹಣೆ ಮಾಡಲೇಬೇಕು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೊಹ್ಲಿ
ಸುದ್ದಿಗೋಷ್ಠಿಯಲ್ಲಿ ಕೊಹ್ಲಿ

ಟ್ರಿನಿಡಾಡ್: ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ವ್ಯಾಪಕ ಚರ್ಚೆಗೀಡಾಗಿರುವ ಬೆನ್ನಲ್ಲೇ ಇಷ್ಟು ದಿನ ಸುಮ್ಮನ್ನಿದ್ದ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ತಂಡದ ಡ್ರೆಸಿಂಗ್ ರೂ ಪಾವಿತ್ರ್ಯತೆಯನ್ನು  ನಾವು ನಿರ್ವಹಣೆ ಮಾಡಲೇಬೇಕು ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ 5 ಪಂದ್ಯಗಳ ಏಕಿದಿನ ಪಂದ್ಯ ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿರಾಟ್ ಕೊಹ್ಲಿ ಮಾತನಾಡಿದ್ದು, ಈ ವೇಳೆ ಅನಿಲ್ ಕುಂಬ್ಳೆ ರಾಜಿನಾಮೆ ಕುರಿತಂತೆ  ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು. "ಅನಿಲ್ ಭಾಯ್ ಕೋಚ್ ಹುದ್ದೆಯಿಂದ ದೂರ ಸರಿಯುವ ನಿರ್ಧಾರ ಕೈಗೊಂಡರು. ನಾವು ಅವರ ನಿರ್ಧಾರವನ್ನು ಗೌರವಿಸಬೇಕಾಗಿದೆ". ಯಾವುದೇ ಕಾರಣಕ್ಕೂ ಡ್ರೆಸಿಂಗ್ ರೂಂ  ಪಾವಿತ್ರ್ಯತೆಯನ್ನು ನಾವು ನಿರ್ಪಹಣೆ ಮಾಡಲೇಬೇಕು ಎಂದು ಹೇಳುವ ಮೂಲಕ ಕೊಹ್ಲಿ ಡ್ರೆಸಿಂಗ್ ರೂಂ ವಿಚಾರಗಳನ್ನು ತಾವು ಬಹಿರಂಗ ಪಡಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಅಂತೆಯೇ "ಕಳೆದ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ 11 ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದೆ. ಆದರೆ ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತದೆ ಎನ್ನು ವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ನಾವು ಮೂರು-ನಾಲ್ಕು ವರ್ಷಗಳಿಂದ  ಡ್ರೆಸ್ಸಿಂಗ್ ರೂಂ ಗುಟ್ಟನ್ನು ಬಹಿರಂಗಪಡಿಸದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಮತ್ತು ಅದನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುತ್ತೇವೆ. ತಂಡದ ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿದ್ದಾರೆ. ಡ್ರಿಸಿಂಗ್  ರೂಂನಲ್ಲಿ ನಡೆಯುವ ಪ್ರತೀಯೊಂದು ಘಟನೆ ಕೂಡ ಆಟಗಾರರ ತೀರಾ ಖಾಸಗಿ ವಿಚಾರವಾಗಿರುತ್ತದೆ. ಹೀಗಾಗಿ ಅದರ ಪಾವಿತ್ರ್ಯತೆಯನ್ನು ನಾವು ನಿರ್ವಹಣೆ ಮಾಡಲೇಬೇಕು" ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ "ಓರ್ವ ಕ್ರಿಕೆಟಿಗನಾಗಿ ಅನಿಲ್ ಭಾಯ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು  ಹಲವು ವರ್ಷಗಳ ಕಾಲ ಆಡಿ ದೇಶದ ಕ್ರಿಕೆಟಿಗೆ ನೀಡಿರುವ  ಕೊಡುಗೆಯನ್ನು ಗೌರವಿಸುವೆ. ಚಾಂಪಿಯನ್ಸ್ ಟ್ರೋಫಿ ಬಳಿಕ  ಅನಿಲ್ ಕುಂಬ್ಳೆ ತಂಡದ ಕೋಚ್ ಹುದ್ದೆ ತೊರೆಯುವುದು ಎಲ್ಲರಿಗೂ ಗೊತ್ತಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಕುಂಬ್ಳೆ ಆರಂಭದಲ್ಲಿ ತಂಡದ ಜೊತೆ ವೆಸ್ಟ್ ಇಂಡೀಸ್ ಸರಣಿಗೆ ತೆರಳಲು ಒಪ್ಪಿಕೊಂಡಿದ್ದರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ  ಅವರು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) , ಬಿಸಿಸಿಐ ಹಂಗಾಮಿ   ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಸಿಇಓ ರಾಹುಲ್ ಚೌಧರಿಯನ್ನು ಭೇಟಿಯಾದ ಬಳಿಕ ಕೋಚ್ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡರು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com