ವಿರಾಟ್ ಕೊಹ್ಲಿ-ಮ್ಯಾಟ್ ರೆನ್ಶಾ
ಕ್ರಿಕೆಟ್
ಮ್ಯಾಟ್ ರೆನ್ಶಾರನ್ನು ಕೊಹ್ಲಿ ಟಾಯ್ಲೆಟ್‌ಗೆ ಹೋಗಿ ಬಾ ಎಂದು ಕಿಚಾಯಿಸಿದ್ದು ಯಾಕೆ ಗೊತ್ತಾ!
ಆಸ್ಟ್ರೇಲಿಯಾ-ಭಾರತ ನಡುವಿನ ಎರಡನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮೊದಲ ಇನ್ನಿಂಗ್ಸ್ ನಲ್ಲಿ ಫೀಲ್ಡಿಂಗ್ ಗೆ ಅಡ್ಡಿಪಡಿಸುತ್ತಿದ್ದ...
ಆಸ್ಟ್ರೇಲಿಯಾ-ಭಾರತ ನಡುವಿನ ಎರಡನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮೊದಲ ಇನ್ನಿಂಗ್ಸ್ ನಲ್ಲಿ ಫೀಲ್ಡಿಂಗ್ ಗೆ ಅಡ್ಡಿಪಡಿಸುತ್ತಿದ್ದ ಆಸ್ಟ್ರೇಲಿಯಾ ಆಟಗಾರ ಮ್ಯಾಟ್ ರೆನ್ಶಾರನ್ನು ವಿರಾಟ್ ಕೊಹ್ಲಿ ಟಾಯ್ಲೆಟ್‌ಗೆ ಹೋಗಿ ಬಾ ಎಂದು ಕಿಚಾಯಿಸಿದರಂತೆ.
ಇದನ್ನು ಸ್ವತಃ ರೆನ್ಶಾ ಪಂದ್ಯ ಮುಗಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ನನಗೆ ರನ್ ಗಳಿಸುವ ಮುನ್ನ ಟಾಯ್ಲೆಟ್‌ಗೆ ಹೋಗಿ ಬಾ ಎಂದು ಕೆಣಕಿದರು. ಇದಕ್ಕೆ ನಾನು ನಕ್ಕು ಸುಮ್ಮನಾದೆ ಎಂದು ಹೇಳಿದ್ದಾರೆ.
ಪುಣೆ ಟೆಸ್ಟ್ ನ ಮೊದಲ ಬ್ಯಾಟಿಂಗ್ ವೇಳೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಮ್ಯಾಟ್ ರೆನ್ಶಾ ಡೇವಿಡ್ ವಾರ್ನರ್ ಔಟಾದ ಬೆನ್ನಲ್ಲೇ ಮೈದಾನದಿಂದ ಹೊರನಡೆದರು. ಹೊಟ್ಟೆ ನೋವಿನಿಂದಾಗಿ ರೆನ್ಶಾ ಕೂಡಲೇ ಶೌಚಾಲಯಕ್ಕೆ ಹೋಗಬೇಕಿತ್ತು. ಇದನ್ನು ಮುಂದಿಟ್ಟುಕೊಂಡು ವಿರಾಟ್ ಕೊಹ್ಲಿ ರೆನ್ಶಾರನ್ನು ಕಿಚಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ