

ನವದೆಹಲಿ: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 75 ರನ್ ಗಳ ಗೆಲುವಿನ ನಂತರ ಟೀಂ ಇಂಡಿಯಾ ಆಫ್ ಸ್ಪಿನ್ನರ್ ರವಿ ಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದರು.
ಇಶಾಂತ್ ಶರ್ಮಾ ಜತೆಗೆ ತೆಗೆದ ಸೆಲ್ಫೀ ಪ್ರಕಟಿಸಿದ್ದ ಅಶ್ವಿನ್ ಈ ವ್ಯಕ್ತಿಯ ಸಿಕ್ಸರ್ ಇಂದಿನ ಗೆಲುವಿಗೆ ಮಹತ್ವದ್ದಾಗಿತ್ತು. ಶ್ರಮವಹಿಸಿ ಬೌಲಿಂಗ್ ಮಾಡಿದರು. ಉತ್ತಮವಾಗಿ ಆಡಿದೆ ಇಶಿ ಎಂದು ಗೆಳೆಯನ ಗುಣಗಾನ ಮಾಡಿದ್ದರು. ಈ ಫೋಟೋಗೆ ಅಶ್ವಿನ್ ಪತ್ನಿ ಪ್ರೀತಿ ಗಂಡನ ಕಾಲೆಳೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರೀತಿ ಅಶ್ವಿನ್ ನಿಮ್ಮ ಸೆಂಡ್ ಆಫ್ ಫೋಟೋವನ್ನು ಪ್ರಕಟಿಸಿ ಪ್ಲೀಸ್. ಆದರೆ ದಯವಿಟ್ಟು ಅದರ ಮೇಲೆ ನಿಮ್ಮ ಕಣ್ಣು ಹಾಯಿಸಬೇಡಿ ಎಂದು ಕಾಲೆಳೆದಿದ್ದಾರೆ. ಅಶ್ವಿನ್ ಮಿಚೆಲ್ ಸ್ಟಾರ್ಕ್ ರನ್ನು ಔಟ್ ಮಾಡಿದ ನಂತರ ವಿಶಿಷ್ಟವಾಗಿ ಸನ್ನೆ ಮಾಡಿ ಅವರಿಗೆ ಸೆಂಡ್ ಆಫ್ ಮಾಡಿದ್ದನ್ನು ಪ್ರೀತಿ ಈ ರೀತಿ ತಮಾಷೆ ಮಾಡಿದ್ದಾರೆ.
This mans 6 runs set us up today!Bowled his heart out too..Well done Ishy pic.twitter.com/RSiUX0Ayft
— Ashwin Ravichandran (@ashwinravi99) March 7, 2017
Give us a pic with your respective send off faces. Please :-) @ashwinravi99. Oh just don't poke your eyes while at it
Advertisement