ದ್ವಾರಕಾ ಹೋಟೆಲ್'ನಲ್ಲಿ ಅಗ್ನಿ ಅವಘಡ: ಕ್ರಿಕೆಟಿಗ ಎಂ.ಎಸ್. ಧೋನಿ ಅಪಾಯದಿಂದ ಪಾರು

ಭಾರತದ ತಂಡ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಜಾರ್ಖಂಡ್ ತಂಡ ವಾಸ್ತವ್ಯ ಹೂಡಿದ್ದ ದ್ವಾರಕಾದ ವೆಲ್'ಕಮ್ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಧೋನಿ ಸೇರಿದಂತೆ ಇನ್ನಿತರರೆ ಆಟಗಾರರು ಆಪಾಯದಿಂದ ಪಾರಾಗಿದ್ದಾರೆಂದು...
ಭಾರತದ ತಂಡ ಮಾಜಿ ನಾಯಕ ಎಂ.ಎಸ್.ಧೋನಿ (ಸಂಗ್ರಹ ಚಿತ್ರ)
ಭಾರತದ ತಂಡ ಮಾಜಿ ನಾಯಕ ಎಂ.ಎಸ್.ಧೋನಿ (ಸಂಗ್ರಹ ಚಿತ್ರ)
ನವದೆಹಲಿ: ಭಾರತದ ತಂಡ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಜಾರ್ಖಂಡ್ ತಂಡ ವಾಸ್ತವ್ಯ ಹೂಡಿದ್ದ ದ್ವಾರಕಾದ ವೆಲ್'ಕಮ್ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಧೋನಿ ಸೇರಿದಂತೆ ಇನ್ನಿತರರೆ ಆಟಗಾರರು ಆಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 
ಕ್ರಿಕೆಟಿಗಿರು ವಾಸ್ತವ್ಯ ಹೂಡಿದ್ದ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯವನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
ಬೆಳಿಗ್ಗೆ 6.30ರ ಸುಮಾರಿಗೆ ವೆಲ್'ಕಮ್ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವುದಾಗಿ ಮಾಹಿತಿ ತಿಳಿದುಬಂದಿತ್ತು. ಕೂಡಲೇ 30 ಅಗ್ನಿಶಾಮಕ ದಳದ ವಾಹನಗಳೊಂದಿಗೆ ಸ್ಥಳಕ್ಕೆ ಹೋಗಲಾಯಿತು. ಕಾರ್ಯಾಚರಣೆ ಬಳಿಕ ಬೆಳಿಗ್ಗೆ 7.30ರ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. 
ಅಗ್ನಿ ಅವಘಡ ಸಂದರ್ಭದಲ್ಲಿ ಆಟಗಾರರಾರು ಕೊಠಡಿಯಲ್ಲಿರಲಿಲ್ಲ. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 
ಇನ್ನು ಘಟನೆಯಲ್ಲಿ ಜಾರ್ಖಾಂಡ್ ಆಟಗಾರರ ಕಿಟ್ ಬ್ಯಾಗ್ ಗಳು ನಾಶವಾಗಿದ್ದು. ಈ ಹಿನ್ನಲೆಯಲ್ಲಿ ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯವನ್ನು ಬಿಸಿಸಿಐ ನಾಳೆಗೆ ಮುಂದೂಡಿದೆ. 
 ಬೆಂಗಾಲ್ ಮತ್ತು ಜಾರ್ಖಂಡ್ ತಂಡದ ನಡುವೆ ಇಂದು ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯ ನಡೆಯಬೇಕಿತ್ತು. ಇದಕ್ಕಾಗಿ ಧೋನಿ ದೆಹಲಿಯ ದ್ವಾರಕಾ ಹೋಟೆಲ್ ನಲ್ಲಿ ತಂಗಿದ್ದರು. ಉಭಯ ತಂಡಗಳೂ ಕೂಡ ಇದೇ ಹೋಟೆಲ್ ನಲ್ಲಿ ತಂಗಿದ್ದರು. ಅಗ್ನಿ ಅವಘಡದಿಂದ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಪ್ರಸ್ತುತ ಆಟಗಾರರನ್ನು ಬೇರೆ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com