ಆದರೆ ನೋವಿನ ನಡುವೆಯೂ ಮೂರನೇ ದಿನ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 23 ಎಸೆತಗಳನ್ನು ಎದುರಿಸಿ 6 ರನ್ ಗಳಿಸಿದ್ದಾಗ ಕಮ್ಮಿನ್ಸ್ ಎಸೆತದಲ್ಲಿ ಸ್ಟಿವ್ ಸ್ಮಿತ್ ಗೆ ಕ್ಯಾಚ್ ನೀಡಿ ಔಟಾಗಿದ್ದರು. ಈ ವೇಳೆ ಕ್ಯಾಚ್ ಹಿಡಿದಿದ್ದ ಸ್ಮಿತ್ ತಮ್ಮ ಭುಜವನ್ನು ಹಿಡಿದುಕೊಂಡು ಕೊಹ್ಲಿಯನ್ನು ಅಣುಕಿಸಿದ್ದರು. ಬಳಿಕ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಬೌಂಡರಿ ಲೈನ್ ನಲ್ಲಿ ಬಾಲ್ ತಡೆದ ನಂತರ ಭುಜದ ನೋವಿಗೆ ಒಳಗಾಗಿರುವ ಹಾಗೇ ಕೊಹ್ಲಿಯನ್ನು ಅಣಕಿಸಿದ್ದಾರೆ.