ಇನ್ನಿಂಗ್ಸ್‌ಗೂ ಮುನ್ನ ಮೈದಾನ ತೊರೆದ ಮುರಳಿಯನ್ನು ಫ*** ಮೋಸಗಾರ ಎಂದ ಸ್ಟೀವ್ ಸ್ಮಿತ್

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್ ಗೂ ಮುಂಚೆ ಟೀಂ ಇಂಡಿಯಾದ ಆಟಗಾರ ಮುರಳಿ...
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್
Updated on
ಧರ್ಮಶಾಲಾ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್ ಗೂ ಮುಂಚೆ ಟೀಂ ಇಂಡಿಯಾದ ಆಟಗಾರ ಮುರಳಿ ವಿಜಯ್ ಮೈದಾನ ತೊರೆದ ಘಟನೆ ನಡೆದಿದ್ದು ಇದಕ್ಕೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮೋಸಗಾರ ಎಂದು ಕರೆದಿದ್ದಾರೆ. 
ಬಾರ್ಡರ್-ಗವಾಸ್ಕರ್ ಟೂರ್ನಿಯ ನಾಲ್ಕು ಟೆಸ್ಟ್ ಪಂದ್ಯ ಪೈಕಿ ಅಂತಿಮ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿತ್ತು. ಗಲ್ಲಿಯಲ್ಲಿ ಫೀಲ್ಡಿಂಗ್ ನಲ್ಲಿದ್ದ ಮುರಳಿ ವಿಜಯ್ ಆಸೀಸ್ ನ ಕೊನೇ ಆಟಗಾರ ಜೋಶ್ ಹ್ಯಾಜ್ಲೆವುಡ್ ಅವರು ಫ್ಲಿಕ್ ಮಾಡಿದ ಚೆಂಡನ್ನು ಕ್ಯಾಚ್ ಪಡೆದರು. ತಾನು ಕ್ಯಾಚ್ ಪಡೆದಿರುವುದು ಸ್ಪುಟವಾಗಿದ್ದರಿಂದ ಮುರಳಿ ದ್ವಿತೀಯ ಇನ್ನಿಂಗ್ಸ್ ಗಾಗಿ ರೆಡಿಯಾಗಲು ಪೆವಿಲಿಯನ್ ಗೆ ತೆರಳಿದರು. 
ಮುರಳಿ ಕ್ಯಾಚ್ ಪಡೆದಿರುವುದರ ಬಗ್ಗೆ ಮೈದಾನದಲ್ಲಿದ್ದ ಅಂಪೈರ್ ಗಳು ಪುನರ್ ಪರಿಶೀಲಿಸಲು ಕೋರಿದರು. ಹೀಗಾಗಿ ಮೂರನೇ ಅಂಪೈರ್ ಗ್ರಿಸ್ ಗ್ಯಾಫೆನೆ ನಾಟೌಟ್ ಎಂದು ತೀರ್ಪು ನೀಡಿದ್ದರಿಂದ ಮುರಳಿ ಮತ್ತೆ ಮೈದಾನಕ್ಕೆ ಆಗಮಿಸಬೇಕಾಯಿತು. ಆನಂತರದ ಎಸೆತದಲ್ಲೇ ಹ್ಯಾಜ್ಲೆವುಡ್ ಔಟಾದರು.
ಇನ್ನು ಡ್ರೆಸ್ಸಿಂಗ್ ರೂಂನಲ್ಲಿದ್ದ ಸ್ಮಿತ್ ಅಸಹನೆಯಿಂದಲೇ ಮುರಳಿಯನ್ನು ಫ...ಮೋಸಗಾರ ಎಂದು ಜರೆದದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com