ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಮಣಿದ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ವಿರುದ್ಧ 7 ರನ್ ಗಳಿಂದ ಗೆಲುವು ಸಾಧಿಸಿದ್ದು ಈ ಮೂಲಕ...
ಕಿಂಗ್ಸ್ ಇಲೆವೆನ್ ಪಂಜಾಬ್
ಕಿಂಗ್ಸ್ ಇಲೆವೆನ್ ಪಂಜಾಬ್
Updated on: 
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ ಇಂಡಿಯನ್ಸ್ ವಿರುದ್ಧ 7 ರನ್ ಗಳಿಂದ ಗೆಲುವು ಸಾಧಿಸಿದ್ದು ಈ ಮೂಲಕ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ ಓವರ್ ನಲ್ಲಿ ಭರ್ಜರಿ 230 ರನ್ ಕಲೆ ಹಾಕಿತು. ಪಂಜಾಬ್ ಪರ ವೃದ್ಧಿಮಾನ್ ಸಾಹಾ 93 ರನ್ ಪೇರಿಸಿ ಶತಕ ವಂಚಿತರಾದರು. 
ಪಂಜಾಬ್ ನೀಡಿದ 231 ರನ್ ಗಳ ಬೃಹತ್ ರನ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಸನಿಹಕ್ಕೆ ಬಂದು ಎಡವಿತು. ಹೀಗಾಗಿ 7 ರನ್ ಗಳಿಂದ ಪಂಜಾಬ್ಗೆ ಮಣಿಯಿತು. 
ಮುಂಬೈ ಪರ ಸಿಮನ್ಸ್ 59, ಪಾರ್ಥಿವ್ ಪಟೇಲ್ 38, ನಿತೀಶ್ ರಾಣಾ 12, ಪೊಲಾರ್ಡ್ 50, ಹಾರ್ದಿಕ್ ಪಾಂಡ್ಯ 30 ರನ್ ಗಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com