ಕೋಲ್ಕತ್ತಾ: ಭಾರತ- ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ಶ್ರೀಲಂಕಾ ತಂಡ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ.
ಲಂಕಾ ಆಟಗಾರರಾದ ಲಹಿರು ತಿರಿಮಾನ್ನೆ (51) ಆಂಜಿಲೋ ಮ್ಯಾಥ್ಯೂಸ್ (52) ರನ್ ಗಳಿಸಿದ್ದು, ದಿನದ ಆಟ ಮುಗಿದಾಗ ಶ್ರೀಲಂಕಾ ತಂಡ ಭಾರತಕ್ಕಿಂತ ಕೇವಲ 4 ರನ್ ಗಳ ಹಿಂದಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳನ್ನು ಗಳಿಸಿದ್ದ ಆತಿಥೇಯ ತಂಡ ಸಂಕಷ್ಟ ಎದುರಿಸುತ್ತಿದೆ.
ಶ್ರೀಲಂಕಾ ಪರ ನಾಯಕ ದಿನೇಶ್ ಚಾಂದಿಮಾಲ್ (13) ನಿರೋಷನ್ ಡಿಕ್ವೆಲ್ಲಾ (14) ಪ್ರಾರಂಭಿಕ ಆಟಗಾರರಾದ ಸದೀರ ಸಮರವಿಕ್ರಮಾ (23) ಡಿಮತ್ ಕರುನಾರಾತ್ನೆ (8) ರನ್ ಗಳನ್ನು ಗಳಿಸಿದ್ದಾರೆ. 2005 ರ ಡಿಸೆಂಬರ್ ತಿಂಗಳಲ್ಲಿ ಶ್ರೀಲಂಕಾ ಭಾರತವನ್ನು 167 ರನ್ ಗಳಿಗೆ ಕಟ್ಟಿಹಾಕಿದ್ದರು, ಇದಾದ ಬಳಿಕ 2 ನೇ ಬಾರಿಗೆ ಶ್ರೀಲಂಕಾ ಭಾರತವನ್ನು 200 ರನ್ ಗಳಿಗಿಂತ ಕಡಿಮೆ ರನ್ ಗಳಿಗೆ ಆಲ್ ಔಟ್ ಮಾಡಿದೆ.