ನಾಗ್ಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆಟಗಾರರಿಂದ 1 ದ್ವಿಶತಕ ಮತ್ತು 3 ಶತಕಗಳು ಹರಿಬಂದಿದೆ.
ನಾಗ್ಪುರದ ವಿದರ್ಭ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ಮುರಳಿ ವಿಜಯ್(128), ಚೇತೇಶ್ವರ ಪೂಜಾರ(143), ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ(213) ಹಾಗೂ ರೋಹಿತ್ ಶರ್ಮಾ ಅಜೇಯ 102 ರನ್ ಗಳಿಸಿದ್ದಾರೆ.
ಇನ್ನಿಂಗ್ಸ್ ವೊಂದರಲ್ಲಿ ಟೀಂ ಇಂಡಿಯಾ ಆಟಗಾರರು ನಾಲ್ಕು ಶತಕಗಳನ್ನು ಸಿಡಿಸಿರುವುದು ಇದು ಮೂರನೇ ಭಾರಿಗೆ. ಈ ಹಿಂದೆ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಟೆಸ್ಟ್ ಶತಕಗಳು ಹರಿದುಬಂದಿದ್ದವು. ಇದರಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಇನ್ನಿಂಗ್ಸ್ ವೊಂದರಲ್ಲಿ 5 ಶತಕ ಸಿಡಿಸಿದ್ದು ಅಗ್ರಸ್ಥಾನದಲ್ಲಿದೆ.