ಟೀಂ ಇಂಡಿಯಾ ಪ್ರಧಾನ ಕೋಚ್ ಹುದ್ದೆ ಆಯ್ಕೆ ಸಂಬಂಧ ಆಯ್ಕೆದಾರರ ಜತೆ ನಾನು ಸೆಟ್ಟಿಂಗ್ ಮಾಡಿಕೊಂಡಿರಲಿಲ್ಲ. ಆದ ಕಾರಣ ಹುದ್ದೆ ನನ್ನ ಕೈ ತಪ್ಪಿತ್ತು ಎಂದು ಸೆಹ್ವಾಗ್ ಹೇಳಿದ್ದರು. ಇದಕ್ಕೆ ಗಂಗೂಲಿ ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.