ಸ್ಮಿತ್ ನಾಯಕತ್ವಕ್ಕೆ ಭಾರತ ವಿರುದ್ಧದ ಸರಣಿ ಅಗ್ನಿ ಪರೀಕ್ಷೆ: ಕ್ಲಾರ್ಕ್

ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಟೀಂ ಇಂಡಿಯಾ ವಿರುದ್ಧದ ಸರಣಿ ದೊಡ್ಡ ಸವಾಲಾಗಿದ್ದು ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ...
ಸ್ಟೀವನ್ ಸ್ಮಿತ್, ಮೈಕಲ್ ಕ್ಲಾರ್ಕ್
ಸ್ಟೀವನ್ ಸ್ಮಿತ್, ಮೈಕಲ್ ಕ್ಲಾರ್ಕ್
ಕೋಲ್ಕತ್ತಾ: ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಟೀಂ ಇಂಡಿಯಾ ವಿರುದ್ಧದ ಸರಣಿ ದೊಡ್ಡ ಸವಾಲಾಗಿದ್ದು ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ. 
ಸ್ಟೀವನ್ ಸ್ಮಿತ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಆದರೆ ನಾಯಕನಾಗಿ ಅವರು ಮುಂದುವರಿಯಬೇಕಿದ್ದರೆ ತಂಡವನ್ನು ಗೆಲುವಿನ ಹಳಿಗೆ ಮರಳಿಸಬೇಕಿದೆ. ಇನ್ನು ಕೋಲ್ಕತ್ತಾ ಪಂದ್ಯ ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ. 
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 26 ರನ್ ಗಳಿಂದ ಭಾರತಕ್ಕೆ ಶರಣಾಗಿತ್ತು. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆಯಲ್ಲಿದ್ದು ಇಂದು ಕೋಲ್ಕತ್ತಾದಲ್ಲಿ ನಡೆಯುವ ಪಂದ್ಯ ಆಸ್ಟ್ರೇಲಿಯಾಗೆ ಪ್ರಮುಖ ಪಂದ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com