

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರು ರಾತ್ರಿಗಳ ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಿಸಲು ನಿರ್ಧರಿಸಿದೆ.
ಪಂದ್ಯದ ದಿನ ಕಬ್ಬನ್ ಪಾರ್ಕ್ ಮತ್ತು ಎಂ. ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣದ ಕಡೆಗೆ ಹಿಂದಿರುಗುವ 50 ರೂ ದರದ ವಿಶೇಷ ಟಿಕೆಟ್ ನ್ನು ಬಿಎಂ ಆರ್ ಸಿಎಲ್ ಘೋಷಿಸಿದೆ.
ಐಪಿಎಲ್ ಪಂದ್ಯದ ದಿನ ನೇರಳೆ ಹಾಗೂ ಹಸಿರು ಮಾರ್ಗದೆರಡರಲ್ಲೂ ಕೊನೆಯ ರೈಲಿನ ವೇಳಾಪಟ್ಟಿಯನ್ನು ಗಂಟೆ ಬದಲಾಗಿ, 12-30 ರವರೆವಿಗೂ ವಿಸ್ತರಿಸಲಾಗುತ್ತಿದೆ. ಪ್ರತಿ 15 ನಿಮಿಷಕ್ಕೆ ಒಂದರಂತೆ ರೈಲುಗಳ ಸಂಚಾರವಿರುತ್ತದೆ ಎಂದು ಬಿಎಂಆರ್ ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಏ.13, 21, 25, 29 ಮೇ 1 ಹಾಗೂ 17 ರವರೆಗೂ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಿಸಲಾಗಿದೆ. ಏಪ್ರಿಲ್ 15 ರಂದು ನಾಲ್ಕು ಗಂಟೆಗೆ ಪಂದ್ಯ ಆರಂಭವಾದರೆ, ರೈಲುಗಳ ವೇಳಾಪಟ್ಟಿಯನ್ನು ಅಂದು ವಿಸ್ತರಿಸುವುದಿಲ್ಲ ಎಂದು ತಿಳಿಸಲಾಗಿದೆ.
ಪಂದ್ಯ ಮುಗಿದ ನಂತರ ಕಬ್ಬನ್ ಪಾರ್ಕ್ ಮತ್ತು ಎಂ. ಜಿ. ರಸ್ತೆ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಐಪಿಎಲ್ ಪಂದ್ಯದ ಮಧ್ಯಾಹ್ನ 4 ಗಂಟೆಯಿಂದಲೂ ಹಿಂದಿರುಗುವ ವಿಶೇಷ ಟಿಕೆಟ್ ಪಡೆಯಬಹುದಾಗಿದೆ ಎಂದು ಬಿಎಂಆರ್ ಸಿಎಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement