ಎಬಿ ಡಿವಿಲಿಯರ್ಸ್ ಸ್ಪೋಟಕ ಬ್ಯಾಟಿಂಗ್, ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್​ ಅಮೋಘ ಆಟದ ನೆರವಿನೊಡನೆ ರಾಯಲ್​ ಛಾಲೆಂಜರ್ಸ್​ ಬೆಂಗಳೂರು...
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್
Updated on: 
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ  ಎಬಿ ಡಿವಿಲಿಯರ್ಸ್​ ಅಮೋಘ ಆಟದ ನೆರವಿನೊಡನೆ  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ  4 ವಿಕೆಟ್ ಜಯ ಸಾಧಿಸಿದೆ.
ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಪಡೆ 19.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು.  
ಪಂಜಾಬ್ ಪರವಾಗಿ ರ ಕೆ. ಎಲ್​ ರಾಹುಲ್​(47), ರವಿಚಂದ್ರನ್​ ಅಶ್ವಿನ್(33) ಹಾಗೂ ಕರುಣ್​ ನಾಯರ್​(29) ಉತ್ತಮ ರನ್ ಕಲೆ ಹಾಕಿದ್ದರು.
ಬೆಂಗಳೂರು ತಂಡದ ಪರವಾಗಿ ಉಮೇಶ್​ ಯಾದವ್​ 3 ವಿಕೆಟ್​ ಕಬಳಿಸಿ ಗಮನ ಸೆಳೆದಿದ್ದರು. ಕ್ರಿಸ್​ ವೋಕ್ಸ್, ಕುಲ್ವಂತ್ ಖೇಜ್ರೋಲಿಯ ಮತ್ತು ವಾಷಿಂಗ್ಟನ್​ ಸುಂದರ್​ ತಲಾ 2  ವಿಕೆಟ್, ಯಜುವೇಂದ್ರ ಚಹಾಲ್​ 1 ವಿಕೆಟ್ ಕಿತ್ತರು.
ಗೆಲುವಿಗೆ 156 ರನ್​ ಗುರಿ ಪಡೆದ ಆರ್​ಸಿಬಿ  19. 3 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 159 ರನ್ ಗಳಿಸುವುದರೊಡನೆ ವಿಜಯಿ ತಂಡವಾಗಿ ಹೊರಹೊಮ್ಮಿತು.
ಬೆಂಗಳೂರು ಪರವಾಗಿ ಎಬಿ ಡಿವಿಲಿಯರ್ಸ್​(57), ಕ್ವಿಂಟನ್​ ಡಿ ಕಾಕ್​(45), ವಿರಾಟ್​ ಕೊಹ್ಲಿ(21) ಮಂದೀಪ್​ ಸಿಂಗ್​(22)  ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. 
ಪಂಜಾಬ್ ಪರವಾಗಿ ರವಿಚಂದ್ರನ್​ ಅಶ್ವಿನ್​ 2 ವಿಕೆಟ್​ ಅಕ್ಷರ್​ ಪಟೇಲ್​, ಮುಜೀಬ್ ಉರ್ ರಹ್ಮಾನ್ ಹಾಗೂ ಆ್ಯಂಡ್ರಿವ್​ ಟೈ ಒಂದೊಂದು ವಿಕೆಟ್ ಪಡೆದುಕೊಂಡರು.
ಬೆಂಗಳೂರಿನ ಪಾಲಿಗೆ ಇದು ಈ ಸರಣಿಯ ಮೊದಲ ಗೆಲುವಾಗಿದೆ ಇದರೊಡನೆ ಫೈನಲ್ ಗೆಲುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com