ಪೂಜಾರ ರನ್ ಔಟ್ ಆದ್ರೆ, ಟ್ವೀಟರಿಗರು ವಿರಾಟ್ ಕೊಹ್ಲಿಯನ್ನು ತೆಗಳೋದ್ ಯಾಕೆ!

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ರನ್ ಔಟ್ ಆಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟೀಂ ಇಂಡಿಯಾ ನಾಯಕ ವಿರಾಟ್
ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ
ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ
ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ರನ್ ಔಟ್ ಆಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ. 
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಆ್ಯಂಡರ್ಸನ್ ಎಸೆತದ ಓವರ್ ನಲ್ಲಿ ಚೇತೇಶ್ವರ ಪೂಜಾರ ಅವರು ಬ್ಯಾಟಿಂಗ್ ಮಾಡಿದ್ದು ಚೆಂಡು ವಿಕೆಟ್ ಪಕ್ಕದಲ್ಲೇ ಇತ್ತು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಪೂಜಾರ ಒಂದು ರನ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಅರ್ಧ ಕ್ರೀಸ್ ಗೆ ಬಂದ ಮೇಲೆ ವಿರಾಟ್ ಕೊಹ್ಲಿ ಹಿಂದಕ್ಕೆ ಹೋಗುವಂತೆ ಸೂಚಿಸಿದರು ಆದರೆ ಅಷ್ಟರಲ್ಲಿ ಪೊಪ್ ಚೆಂಡು ಹಿಡಿದು ವಿಕೆಟ್ ಬೆಲ್ಸ್ ಅನ್ನು ಎಗರಿಸಿದರು. ಒಟ್ಟಿನಲ್ಲಿ ಪೂಜಾರ ರನ್ ಔಟ್ ಗೆ ಬಲಿಯಾಗಿದ್ದಾರೆ. 
ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿಯ ಸ್ವಾರ್ಥದಿಂದಾಗಿ ಚೇತೇಶ್ವರ ಪೂಜಾರ ಅವರು ರನ್ ಔಟ್ ಗೆ ಬಲಿಯಾದರು. ಇದು ಕೊಹ್ಲಿಯದ್ದೇ ತಪ್ಪು, ಪೂಜಾರ ತಂಡದಲ್ಲಿರುವುದು ಕೊಹ್ಲಿಗೆ ಇಷ್ಟವಿಲ್ಲ ಎಂದು ಟ್ವೀಟರಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.  ಇನ್ನು ಹಲವರು ಕೊಹ್ಲಿಯನ್ನು ಸಮರ್ಥಿಸಿಕೊಳ್ಳುತ್ತಿದ್ದು ಚೇತೇಶ್ವರ ಪೂಜಾರ ಬೇಡವಾಗಿದ್ದರೇ ಅವರಿಗೇಕೆ ತಂಡದಲ್ಲಿ ಆಡಲು ಸ್ಥಾನ ನೀಡುತ್ತಿದ್ದರು. ಕೊಹ್ಲಿ ಸ್ವಾರ್ಥಿಯಲ್ಲ. ಚೇತೇಶ್ವರ ಪೂಜಾರನೇ ರನ್ ತೆಗೆದುಕೊಳ್ಳಲು ಮುಂದಾಗಿದ್ದು ಕ್ರಿಸ್ ಮಧ್ಯಕ್ಕೆ ಬಂದು ಇಬ್ಬರು ಗೊಂದಲಕ್ಕೆ ಸಿಲುಕ್ಕಿದ್ದರಿಂದ ಪೂಜಾರ ರನ್ ಔಟ್ ಗೆ ಬಲಿಯಾಗಬೇಕಾಯಿತು ಎಂದು ಟ್ವೀಟಿಸುತ್ತಿದ್ದಾರೆ.
ಇನ್ನು ಚೇತೇಶ್ವರ ಪೂಜಾರ ಇದೇ ಮೊದಲ ಬಾರಿಗೆ ರನ್ ಔಟ್ ಆಗುತ್ತಿರುವುದಲ್ಲ. ರನ್ ತೆಗೆದುಕೊಳ್ಳುವ ಬರದಲ್ಲಿ ಸುಮಾರ 8 ಬಾರಿ ರನ್ ಔಟ್ ಆಗಿದ್ದಾರೆ. ಇದು ಚೇತೇಶ್ವರ ಪೂಜಾರ ರನ್ ತೆಗೆದುಕೊಳ್ಳುವಲ್ಲಿ ಸಾಕಷ್ಟು ಎಡವುತ್ತಿದ್ದಾರೆ ಅಂತ ಅನಿಸುತ್ತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com